ಹಿರೇಬಂಡಾಡಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಹಿರೆಬಂಡಾಡಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೆಬಂಡಾಡಿ ಇಲ್ಲಿ ದಿನಾಂಕ ಸೆ.12ರಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ವಿದ್ಯಾರ್ಥಿಗಳಿಂದ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ವೇದಿಕೆಗೆ ಎಲ್ಲಾ ಶಿಕ್ಷಕರನ್ನು ಅದ್ದೂರಿಯಿಂದ ಕರೆದುಕೊಂಡು ಬಂದು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಹಿರಿಯ ಮುಖ್ಯ ಗುರುಗಳಾದ ಬಾಬು ಟಿ ಮಾತಾಡಿ “ಶಿಕ್ಷಕರು ಸಮಾಜವನ್ನು ಸರಿ ದಾರಿಗೆ ತೆಗೆದುಕೊಂಡು ಹೋಗುವ ರೂವಾರಿಗಳು, ಮಕ್ಕಳನ್ನು ಹೇಗೆ ತಯಾರುಗೊಳಿಸುತ್ತಾರೋ ಅದೇ ರೀತಿ ಸಮಾಜವು ಮುಂದೆ ರೂಪುಗೊಳ್ಳುವುದು, ಇಂದು ಶಿಕ್ಷಕ ವೃಂದ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದರು, ಶಿಕ್ಷಕರು ತನ್ನತನವನ್ನು ಉಳಿಸಿಕೊಂಡು ಸ್ವಸ್ಥ ಸಮಾಜವನ್ನು ರೂಪುಗೊಳಿಸುವುದು ಶಿಕ್ಷಕನ ಕರ್ತವ್ಯ” ಎಂದರು. SDMC ಅಧ್ಯಕ್ಷರಾದ ಕವಿತಾ ಕೆ ಇವರು ಮಾತನಾಡಿ ” ನಾವು ನಮ್ಮ ಶಿಕ್ಷಕರನ್ನು ಗೌರವಿಸಿದ್ದಲ್ಲಿ ಮುಂದೆ ನಮನ್ನೂ ಸಮಾಜ ಗೌರವ ಸ್ಥಾನಕ್ಕೆ ಕೊಂಡೊಯ್ಯುತ್ತದೆ” ಎಂದರು.

ನಂತರದಲ್ಲಿ ಶಿಕ್ಷಕರಿಗೆ ವಿವಿಧ ಮೋಜಿನ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಶಾಲಾ ನಾಯಕಿ ಕು.ಧೃತಿ ನೇತೃತ್ವದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಎಲ್ಲಾ ಶಿಕ್ಷಕ ವೃಂದದವರನ್ನು SDMC ಅಧ್ಯಕ್ಷರು ಮತ್ತು ಸದಸ್ಯರ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಮುಖ್ಯ ಗುರುಗಳಾದ ಬಾಬು ಟಿ ಮತ್ತು ಶಿಕ್ಷಕ ವೃಂದದವರು ಹಾಗೂ SDMC ಅಧ್ಯಕ್ಷರಾದ ಕವಿತಾ ಕೆ ಉಪಾಧ್ಯಕ್ಷರಾದ ತಿಮ್ಮಪ್ಪ ಗೌಡ ಸದಸ್ಯರುಗಳಾದ ಜ್ಯೋತಿ,ಮಧುಶ್ರೀ, ದಮಯಂತಿ, ಸೀತಾ, ಶುಭಲತಾ,ಬೇಬಿ, ಸೇಸಪ್ಪ ನೆಕ್ಕಿಲು,ಝಕರಿಯ, ಮಧುಸೂದನ, ಚರಣ್ ರಾಜ್, ವಿಶುಕುಮಾರ್, ರೋಹಿತಾಕ್ಷ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಎಲ್ಲಾ ಜವಾಬ್ದಾರಿಯನ್ನು SDMC ಅಧ್ಯಕ್ಷರಾದ ಕವಿತಾ ಇವರು ವಹಿಸಿಕೊಂಡು ಕಾರ್ಯಕ್ರಮ ನಿರೂಪಿಸಿದರು, ಕು. ಆರಿಫಾ (7ನೇ ತರಗತಿ ) ಸ್ವಾಗತಿಸಿ, ಶುಭಲತಾ ವಂದಿಸಿದರು.

LEAVE A REPLY

Please enter your comment!
Please enter your name here