ಪೂರ್ಣಿಮಾ ರವಿಗೆ ಪಿಎಚ್‌ಡಿ ಪದವಿ

0

ಪುತ್ತೂರು: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾಷಾ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಪೂರ್ಣಿಮಾ ರವಿ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಡಾ. ನಯನ ಕೆ. ಎಸ್.ಅವರ ಮಾರ್ಗದರ್ಶನದಲ್ಲಿ ಪೂರ್ಣಿಮಾ ರವಿ ತಯಾರಿಸಿದ “ಅನ್ ರಾವೆಲ್ಲಿಂಗ್ ದಿ ಲೈವ್ಸ್ ಆಫ್ ದೇವದಾಸಿಸ್; ಎ ಕ್ರಿಟಿಕಲ್ ಸ್ಟಡಿ ಆಫ್ ಸೆಲೆಕ್ಟ್ ಫಿಕ್ಷನಲ್ ಅಂಡ್ ನಾನ್ ಫಿಕ್ಷನಲ್ ನರೇಟಿವ್ಸ್” ಅನ್ನುವ ಸಂಶೋಧನಾ ಮಹಾ ಪ್ರಬಂಧಕ್ಕೆ ಈ ಗೌರವ ಲಭಿಸಿದೆ.
ತಮ್ಮ ಸಂಶೋಧನೆಯ ಭಾಗವಾಗಿ ಪೂರ್ಣಿಮಾ ರವಿ ಅವರು ನಿರ್ದೇಶಿಸಿದ “ಗಾಡ್ಸ್ ವೈವ್ಸ್ – ಮೆನ್ಸ್ ಸ್ಲೇವ್ಸ್ “ಸಾಕ್ಷ್ಯ ಚಲನಚಿತ್ರ ಬೆಳಗಾವಿಯ ಸುವರ್ಣ ವಿಧಾನ ಸೌಧ ಸೇರಿದಂತೆ ರಾಜ್ಯ ಹಾಗೂ ದೇಶದ ಹಲವೆಡೆ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳಿಗೆ ಆಯ್ಕೆಯಾಗಿತ್ತು.

ಉಪ್ಪಿನಂಗಡಿಯ ರವಿ ನಾರಾಯಣ ನೂಜಿಬೈಲು ಅವರ ಪತ್ನಿಯಾಗಿರುವ ಇವರು ಕಳತ್ತಜೆ ರಾಮಕೃಷ್ಣ ಭಟ್ ಬಿ. ಹಾಗೂ ವಾಣಿ ಆರ್. ಭಟ್ ಅವರ ಪುತ್ರಿ.

LEAVE A REPLY

Please enter your comment!
Please enter your name here