ವಾದನದ ಹೊಸ ಸಾಧನ ಖರೀದಿ: ಮಹಾಲಿಂಗೇಶ್ವರನಿಗೆ 1 ಗ್ರಾಂ ಸ್ವರ್ಣ ಸಮರ್ಪಣೆ

0

ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಯಾಕ್ಸೋಫೋನ್ ಕಲಾವಿದ ಪಿ.ಕೆ. ಗಣೇಶ್ ಅವರು ಕೆನಡಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹೊಸ ವಾದನ ಸಾಧನವನ್ನು ಖರೀದಿಸಿದ್ದಾರೆ.

ಈ ಹೊಸ ವಾದನದ ಅಂಗವಾಗಿ ಹಾಗೂ ದೇವರ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ದಂಪತಿ ಸಮೇತ ಬಂದು 1 ಗ್ರಾಂ ಸ್ವರ್ಣವನ್ನು ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಗೌರವಿಸಿ, ಪ್ರಧಾನ ಅರ್ಚಕರು ಪ್ರಸಾದ ನೀಡಿ ಗೌರವಿಸಿರು.

LEAVE A REPLY

Please enter your comment!
Please enter your name here