







ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಸ್ವರ್ಣ ಕವಚ ನಿರ್ಮಾಣಕ್ಕೆ ಬೆಂಗಳೂರಿನ ಸುಮತಿ ಭಟ್ ಮತ್ತು ಮೈಸೂರಿನ ಡಾ.ನಳಿನಿ ಪೈ ಕುಟುಂಬದಿಂದ ಜೊತೆಯಾಗಿ 18 ಗ್ರಾಂ ಸ್ವರ್ಣ ಮತ್ತು 50,005 ಅನ್ನದಾನಕ್ಕೆ ದೇಣಿಗೆ ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದಾನಿಗಳನ್ನು ಗೌರವಿಸಿದರು.












