







ಪುತ್ತೂರು: ವಾಹನ ಅಪಘಾತದಿಂದ ಗಾಯಗೊಂಡಿರುವ ಮಾಜಿ ಸಚಿವ ರಮಾನಾಥ ರೈಯವರನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಂದ ಬಂಟ್ವಾಳದ ಪಚ್ಚಿನಡ್ಕದಲ್ಲಿರುವ ಅವರ ನಿವಾಸಕ್ಕೆ ತೆರಳಿ
ಭೇಟಿ ಯಾಗಿ ಆರೋಗ್ಯ ವಿಚಾರಿಸಿದರು.


ಇದೇ ಸಂದರ್ಭದಲ್ಲಿ ಅಧಿವೇಶನಕ್ಕಾಗಿ ಬೆಂಗಳೂರಿಗೆ ತೆರಳಿರು ಶಾಸಕ ಅಶೋಕ್ ಕುಮಾರ್ ರೈಯವರು ಕರೆ ಮಾಡಿ ರಮಾನಾಥ ರೈ ಅವರೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿದರು.



ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಅಳ್ವ, ಕುರಿಯ ವಲಯ ಅಧ್ಯಕ್ಷ ಸನತ್ ರೈ ಏಳ್ನಾಡುಗುತ್ತು ಮತ್ತು ಪುತ್ತೂರು ಬ್ಲಾಕ್ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀನ್ ರೈ ಬನ್ನೂರು ಮೊದಲಾದವರಿ ಉಪಸ್ಥಿತರಿದ್ದರು.










