







ರಾಮಕುಂಜ: ದ.ಕ.ಜಿಲ್ಲಾ ಪಂಚಾಯತ್ ಉಪನಿರ್ದೇಶಕರು ಆಡಳಿತ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸರ್ಕಾರಿ ಉ.ಹಿ.ಪ್ರಾ.ಶಾಲೆ ಹಳೆನೇರಂಕಿ ಇದರ ಆಶ್ರಯದಲ್ಲಿ ಹಳೆನೇರಂಕಿ ಶಾಲೆಯಲ್ಲಿ ಸೆ.21ರಂದು ನಡೆದ ದ.ಕ.ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕ/ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಹಳೆನೇರಂಕಿ ಶಾಲೆಯ ಬಾಲಕ/ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.



ಬಾಲಕರ ವಿಭಾಗದಲ್ಲಿ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಚಿಂತನ್ ಸವ್ಯಸಾಚಿ ಆಟಗಾರ ಹಾಗೂ ಪುಷ್ಪೇಂದ್ರ ಬೆಸ್ಟ್ ಚೇಸರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.



ಬಾಲಕಿಯರ ವಿಭಾಗದಲ್ಲಿ ಹಳೆನೇರಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಜಸ್ಮಿತ ಸವ್ಯಸಾಚಿ ಆಟಗಾರ್ತಿ ಹಾಗೂ ಸರ್ವದ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಬಿ.ತರಬೇತಿ ನೀಡಿದ್ದಾರೆ. ಮಾಧವ ಬಿ.ಎಂ.ಮತ್ತು ಭರತ್ ಅವರು ವಿಶೇಷ ತರಬೇತಿ ನೀಡಿದ್ದರು.










