







ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಹಲವಾರು ವರ್ಷಗಳಿಂದ ಭಕ್ತಾದಿಗಳ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿರುವ 92ನೇ ವರ್ಷದ ನವರಾತ್ರಿ ಉತ್ಸವ, ಚಂಡಿಕಾಹೋಮ ಹಾಗೂ ವೈಭವದ ಪುತ್ತೂರು ದಸರಾ ಕುರಿತಂತೆ ಶಾರದೆಯ ವಿಗ್ರಹ ಮುಹೂರ್ತವು ಸೆ.25ರಂದು ಬೆಳಿಗ್ಗೆ ನಡೆಯಿತು.


ಆರಂಭದಲ್ಲಿ ಮಂದಿರದ ಪದಾಧಿಕಾರಿಗಳು ಮಹಾಲಿಂಗೇಶ್ವರ ದೇವಸ್ಥಾನ, ಶಾರದಾ ಭಜನಾ ಮಂದಿರದ ಸನ್ನಿಧಿಯಲ್ಲಿ ಪ್ರಾರ್ಥಿಸಿದರು. ಬಳಿಕ ಹಾರಾಡಿ ಹಿ.ಪ್ರಾ. ಶಾಲೆ ಬಳಿಯ ಶಿವಣ್ಣ ಪ್ರಭು (ಬಾಬುರಾಯ ಹೊಟೇಲ್)ರವರ ಮನೆಯ ಕಟ್ಟಡದಲ್ಲಿ ಪ್ರಭು ಸ್ಟುಡಿಯೋದ ಮಾಲಕ ಶ್ರೀನಿವಾಸ ಪ್ರಭುರವರು ವಿಗ್ರಹ ಮುಹೂರ್ತ ಪೂಜೆ ನೆರವೇರಿಸಿದರು.



ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ವಸಂತ್‌ಕುಮಾರ್, ಶೋಭಾಯಾತ್ರೆ ಸಂಚಾಲಕರಾದ ಕೃಷ್ಣ ಎಂ ಅಳಿಕೆ, ನವೀನ್‌ಕುಲಾಲ್ ಸೇರಿದಂತೆ ಮಂದಿರದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










