







ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು(ರಿ) ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಸೆ.25ನೇ ಶುಕ್ರವಾರದಂದು, ಘಟಕದ ಅಧ್ಯಕ್ಷರಾದ ಪ್ರೊl ವೇದವ್ಯಾಸ ರಾಮಕುಂಜ ಇವರ ಸ್ವಗೃಹ ‘ಶ್ರೀಮಾದಲ್ಲಿ’ ನಡೆದ ಅನಂತನೋಂಪಿ ಆರಾಧನಾ ಪೂಜೆಯ ಅಂಗವಾಗಿ ಮನೆ ಮನೆ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮವು ನಡೆಯಿತು.



ಈ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದಿಂದ ಆಯ್ದ ‘ಶ್ರೀಕೃಷ್ಣ ಕಾರುಣ್ಯ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಗಮಕಿ ಶ್ರೀಮತಿ ಸುವರ್ಣ ಕುಮಾರಿ ವಾಚಿಸಿ, ಕರ್ನಾಟಕ ಕಲಾಶ್ರೀ ಗಮಕಿ ಗೌರವ ಪ್ರಶಸ್ತಿ ಭಾಜನರಾದ ಪ್ರೊl ಮಧೂರು ಮೋಹನ ಕಲ್ಲೂರಾಯರು ವ್ಯಾಖ್ಯಾನಿಸಿದರು.



ಘಟಕದ ಅಧ್ಯಕ್ಷರಾದ ಪ್ರೊl ವೇದವ್ಯಾಸ ರಾಮಕುಂಜ ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿ, ಸರ್ವರನ್ನೂ ಸ್ವಾಗತಿಸಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರಿ ಶರ್ಮ, ಕುಟುಂಬದ ಸದಸ್ಯರು, ಬಂಧುಗಳು, ಕಲಾಸಕ್ತ ಊರ ಮಹನೀಯರು ಉಪಸ್ಥಿತರಿದ್ದರು. ಅಚ್ಚುಕಟ್ಟಾಗಿ ನಡೆದ ಗಮಕ ಕಾರ್ಯಕ್ರಮವು ಕಲಾಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.










