ಮುಕ್ಕೂರು: ಅಂತರ್ ತಾಲೂಕು ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ

0

ಆಯಾ ಶಾಲೆಗಳಿಗೆ ತೆರಳಿ ವಿಜೇತರು, ಮೆಚ್ಚುಗೆ ಪಡೆದ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ಹಸ್ತಾಂತರ

ಕಾಣಿಯೂರು: ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸೆ.13ರಂದು ನಡೆದ ಅಂತರ್ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರು ಹಾಗೂ ಮೆಚ್ಚುಗೆ ಪಡೆದ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳಿಗೆ ತೆರಳಿ ಬಹುಮಾನ ವಿತರಿಸಲಾಯಿತು.


ಸೆ.25 ಹಾಗೂ 28ರಂದು ದರ್ಖಾಸು ಸ.ಹಿ.ಪ್ರಾ.ಶಾಲೆ, ಬೆಳ್ಳಾರೆ ಕೆಪಿಎಸ್, ಕಾಣಿಯೂರು ಸ.ಹಿ.ಪ್ರಾ.ಶಾಲೆ, ಕೊಡಿಪ್ಪಾಡಿ ಅರ್ಕ ಹಿ.ಪ್ರಾ.ಶಾಲೆ, ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆ, ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ, ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ, ನೆಟ್ಟಾರು ಹಾಗೂ ಪುಣ್ಚಪ್ಪಾಡಿ ಸ.ಹಿ.ಪ್ರಾ.ಶಾಲೆ, ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯ, ಮುಕ್ಕೂರು ಸ.ಹಿ.ಪ್ರಾ.ಶಾಲೆ ಹಾಗೂ ಮುಕ್ಕೂರು ಅಂಗನವಾಡಿ ಕೇಂದ್ರಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಮಿತಿ ಪದಾಧಿಕಾರಿ ತೇಜಸ್ವಿತ್ ಅಡ್ಯತಕಂಡ ಅವರು ಆಯಾ ಶಾಲೆಗಳ ಶಿಕ್ಷಕರ ಸಮ್ಮುಖದಲ್ಲಿ ಬಹುಮಾನಗಳನ್ನು ಹಸ್ತಾಂತರಿಸಿದರು.

ಅಂಗನವಾಡಿ, 1ರಿಂದ 2ನೇ, 3ರಿಂದ 4ನೇ, 5ರಿಂದ 7ನೇ ಹಾಗೂ 8ರಿಂದ 10ನೇ ತರಗತಿ ಹೀಗೆ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಮೆಚ್ಚುಗೆ ಬಹುಮಾನ ನೀಡಲಾಯಿತು.

LEAVE A REPLY

Please enter your comment!
Please enter your name here