ಶ್ರೀ ವಿಷ್ಣು ವಾಲಿಬಾಲ್ ಕುದುರೆಡ್ಕ ವತಿಯಿಂದ DPL ವಾಲಿಬಾಲ್‌ ಪಂದ್ಯಾಟ : ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಶ್ರೀ ವಿಷ್ಣು ವಾಲಿಬಾಲ್ ಕುದುರೆಡ್ಕ ಪ್ರಸ್ತುತಪಡಿಸುವ DPL-2k26 ಪಂದ್ಯಾಕೂಟದ ಆಮಂತ್ರಣ ಪತ್ರವನ್ನು ಕುದುರೆಡ್ಕ ದೈವಗಳ ಸಾನ್ನಿಧ್ಯದಲ್ಲಿ ಬಿಡುಗಡೆ ಮಾಡಲಾಯಿತು.

ಶ್ರೀ ವಿಷ್ಣು ವಾಲಿಬಾಲ್ ಕುದುರೆಡ್ಕ ಪ್ರಾಯೋಜಕತ್ವದಲ್ಲಿ ದೀಚು ಪ್ರೀಮಿಯರ್ ಲೀಗ್ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟವು ಅಕ್ಟೋಬರ್ 18ರಂದು ಕುದುರೆಡ್ಕ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ 8.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಅನೇಕ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.

ವಿಶೇಷ ಆಕರ್ಷಣೆಯಾಗಿ ಅಕ್ಟೋಬರ್ 23ರಂದು ಬಿಡುಗಡೆಯಾಗಲಿರುವ ‘ಬನ’ ಚಿತ್ರತಂಡವು ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ಸಂಘಟಕರಾದ ಟೀಂ ಎಸ್‌ವಿವಿಕೆ ತಿಳಿಸಿದೆ.

LEAVE A REPLY

Please enter your comment!
Please enter your name here