







ಪುತ್ತೂರು: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಪುತ್ತೂರು ಮತ್ತು ಯಕ್ಷರಂಗ ಪುತ್ತೂರು, ದ.ಕ. ಇದರ ವತಿಯಿಂದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗ ಇವರ ಸಹಭಾಗಿತ್ವದೊಂದಿಗೆ 20ನೇ ವರ್ಷದ ಯಕ್ಷಗಾನ ತಾಳಮದ್ದಳೆ ಕಾರ್‍ಯಕ್ರಮ ಅ. ೨ ರಂದು ದಿನ ಪೂರ್ತಿ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರ ರಾಜಾಂಗಣದಲ್ಲಿ ಜರಗಲಿದೆ.


ಪೂರ್ವಾಹ್ನ ಗಂಟೆ 9.30ರಿಂದ ಯಕ್ಷಗಾನ ತಾಳಮದ್ದಳೆ ಶ್ರೀಮತಿಯ ಮದುವೆ (ಹವ್ಯಕ) (ಸೇರಾಜೆ ಸೀತಾರಾಮ ಭಟ್ಟ ವಿರಚಿತ ಹವ್ಯಕ ಪೌರಾಣಿಕ ಕಥಾನಕ) ಹಿಮ್ಮೇಳದಲ್ಲಿಭಾಗವರಾಗಿ ಚಿನ್ಮಯ ಭಟ್ ಕಲ್ಲಡ್ಕ, ಮೃದಂಗ ಮತ್ತು ಚೆಂಡೆಯಲ್ಲಿ ಗಣೇಶ್ ಭಟ್ ಬೆಳ್ಳಾರೆ, ಕೊಂಕಣಾಜೆ ಚಂದ್ರಶೇಖರ ಭಟ್, ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಸೇರಾಜೆ ಸೀತಾರಾಮ ಭಟ್ಟ ಪನೆಯಾಲ ರವಿರಾಜ ಭಟ್, ವಾಟೆಪಡ್ಪು ವಿಷ್ಣು ಶರ್ಮ, ರಾಧಾಕೃಷ್ಣ ಕಲ್ಚಾರ್, ಪಶುಪತಿ ಶಾಸ್ತ್ರಿ, ಡಾ| ಹರೀಶ್ ಜೋಷಿ ವಿಟ್ಲ ಹಾಗೂ ಸಾವಿತ್ರಿ ಶಾಸ್ತ್ರಿರವರು ಭಾಗವಹಿಸಲಿದ್ದಾರೆ.



ಮಧ್ಯಾಹ್ನ ಗಂಟೆ 2.00ರಿಂದ: ಭರತಾಗಮನ ಮತ್ತು ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಕುರಿಯ ಗಣಪತಿ ಶಾಸ್ತ್ರಿ, ವಾಸುದೇವ ಭಟ್ ಎರ್ಮಾಳು, ರಮೇಶ್ ಭಟ್, ಚಿನ್ಮಯ ಭಟ್ ಕಲ್ಲಡ್ಕ ಮೃದಂಗ ಮತ್ತು ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀನಾರಾಯಣ ಅಡೂರು, ರಾಮಮೂರ್ತಿ ಕುದ್ರೆಕೋಡ್ಲು ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಪವನ್ ಕಿರಣಕೆರೆ, ವಾಟೆಪಡ್ಪು ವಿಷ್ಣು ಶರ್ಮ, ಸೇರಾಜೆ ಸೀತಾರಾಮ ಭಟ್ಟ, ರವಿರಾಜ ಪನೆಯಾಲ, ರಾಧಾಕೃಷ್ಣ ಕಲ್ಚಾರ್, ಪಶುಪತಿ ಶಾಸ್ತ್ರಿ, ಡಾ| ಹರೀಶ್ ಜೋಷಿ ವಿಟ್ಲ ಹಾಗೂ ಸಾವಿತ್ರಿ ಶಾಸ್ತ್ರಿರವರು ಭಾಗವಹಿಸಲಿದ್ದಾರೆ
ಸಂಜೆ ಕಲಾರತ್ನ- ಸಂಸ್ಮರಣೆ ಕಾರ್‍ಯಕ್ರಮ ಅ.2ರಂದು ಸಂಜೆ ಗಂಟೆ 4.30ರಿಂದ ನಮ್ಮ ಹೆಮ್ಮೆಯ ಕಲಾರತ್ನ-ಸಂಸ್ಮರಣೆ ಕಾರ್‍ಯಕ್ರಮ ನಡೆಯಲಿದೆ. ಗೋವಿಂದ ಭಟ್ ಸೂರಿಕುಮೇರು, ವಿಟ್ಲ ಶಂಭು ಶರ್ಮ, ರಸಿಕ ರತ್ನ ವಿಟ್ಲ ಜೋಷಿ ಹಾಗೂ ಹಾಸ್ಯರತ್ನ ನಯನ ಕುಮಾರ್‌ರವರುಗಳ ಸಂಸ್ಮರಣೆ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ| ಅಶೋಕ್ ಪ್ರಭುರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಲಾ ಪೋಷಕ ಟಿ. ಶ್ಯಾಮ ಭಟ್‌ರವರು ಭಾಗವಹಿಸಲಿದ್ದಾರೆ. ಸಂಸ್ಮರಣೆ ಭಾಷಣವನ್ನು ಯಕ್ಷಗಾನ ಕಲೋಪಾಸಕರು ಮತ್ತು ಅನನ್ಯ ಫೀಡ್ಸ್ ಸಂಸ್ಥೆಯ ಮಾಲಕ ದಿವಾಣ ಗೋವಿಂದ ಭಟ್ ಮಾಡಲಿದ್ದಾರೆ ಎಂದು ಅಧ್ಯಕ್ಷರು ಮತ್ತು ಸದಸ್ಯರು ಆಡಳಿತ ಮಂಡಳಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಪುತ್ತೂರು ಮತ್ತು ಯಕ್ಷರಂಗ ಪುತ್ತೂರು ಅಧ್ಯಕ್ಷ ಕಾಡೂರು ಸೀತಾರಾಮ ಶಾಸ್ತ್ರಿ ಮತ್ತು ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ (ರಿ.) ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಪ್ರಕಟನೆ ತಿಳಿಸಿದೆ.










