ಕುಂಟ್ಯಾನ ಅಂಗನವಾಡಿ ಕಾರ್ಯಕರ್ತೆ ಯಶೋಧರವರ ಬೀಳ್ಕೊಡುಗೆ ಕಾರ್ಯಕ್ರಮ

0

ಆಲಂಕಾರು: ಪೆರಾಬೆ ಗ್ರಾಮದ ಕುಂಟ್ಯಾನ ಅಂಗನವಾಡಿಯ ಕಾರ್ಯಕರ್ತೆಯಾಗಿದ್ದ ಯಶೋಧ. ಬಿ ಯವರ ಬೀಳ್ಕೊಡುಗೆ ಕಾರ್ಯಕ್ರಮ ಕುಂಟ್ಯಾನ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಅಂಗನವಾಡಿ ಮೇಲ್ವಿಚಾರಕಿ ಭವಾನಿ , ನಾಗಪ್ಪ ಗೌಡ ಪಾಲೆಚ್ಚಾರು, ಪೆರಾಬೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಲೀಲಾವತಿ ಅಗತ್ತಾಡಿ, ಮತ್ತು ಬಾಲವಿಕಾಸ ಸಮಿತಿ ಅಧ್ಯಕ್ಷೆ ರೇಖಾ ರವರು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಯಶೋದ ರವರ ನಿವೃತ್ತಿ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.


ನಂತರ ಶ್ರೀಮತಿ ಯಶೋಧ. ಬಿ ಮಾತನಾಡಿ ಊರಿನವರ ಉತ್ತಮ ಸಹಕಾರದಿಂದ ಸತತ 36ವರ್ಷಗಳ ಕಾಲ ನಾನು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿ ಭಾವುಕರಾದರು.

ಪವನ್ ಇಡಾಳ ಕಾರ್ಯಕ್ರಮ ನಿರೂಪಿಸಿ,ಭವಾನಿ, ಶಿಲ್ಪಾ, ಅಕ್ಷಿತ ಪ್ರಾರ್ಥಿಸಿ ಶಿಲ್ಪರಂಜನ್ ಸ್ವಾಗತಿಸಿ,ಪವನ್ ವಂದಿಸಿದರು.ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದದವರು,ಹಿರಿಯ ವಿದ್ಯಾರ್ಥಿಗಳು ,ಊರಿನವರು ಸಹಕರಿಸಿದರು

LEAVE A REPLY

Please enter your comment!
Please enter your name here