ಪಾಣಾಜೆಯಲ್ಲಿ ಸ್ಥಗಿತಗೊಂಡ ತ್ಯಾಜ್ಯ ವಿಲೇವಾರಿ : ತಕ್ಷಣ ಆರಂಭಿಸುವಂತೆ ಪುತ್ತಿಲ ಪರಿವಾರ ವತಿಯಿಂದ ಪಿಡಿಒಗೆ ಮನವಿ

0

ಪಾಣಾಜೆ: ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿಂದ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡಿದ್ದು, ಅಂಗಡಿ ಮತ್ತು ಮನೆಗಳಿಂದ ಸಂಗ್ರಹಿಸಿಟ್ಟ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ತಕ್ಷಣ ಆರಂಭಿಸಬೇಕೆಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ ಗ್ರಾಮ ಸಮಿತಿ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಅ.2ರಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ಪ್ರೇಮ್ ರಾಜ್ ಆರ್ಲಪದವು, ಸಂದೀಪ್ ಕಡಮಾಜೆ, ಪ್ರದೀಪ್ ಪಾಣಾಜೆ, ಹರೀಶ್ ಪೂಜಾರಿ ಕಡಮಾಜೆ ಉಪಸ್ಥಿತರಿದ್ದರು.ಪಿಡಿಒ ಸ್ಪಷ್ಟನೆ: ತ್ಯಾಜ್ಯ ಘಟಕದ ವಾಹನ ಚಾಲಕಿ ಕೆಲಸ ಬಿಟ್ಟಿದ್ದಾರೆ. ಘಟಕದಲ್ಲಿ ಸ್ಟಾಕ್ ಹೆಚ್ಚಿರುವುದು ಮತ್ತು ತ್ಯಾಜ್ಯ ನಿರ್ವಹಣಾ ಘಟಕದವರು ಸಮಯಕ್ಕೆ ತ್ಯಾಜ್ಯ ಕೊಂಡೊಯ್ಯದಿರುವುದು ವಿಳಂಬಕ್ಕೆ ಕಾರಣ. ಘಟಕದಿಂದ ಕ್ಲಿಯರ್ ಮಾಡದೆ ಕೆಲಸ ಮಾಡುವುದಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಆದರೂ ಅಂಗಡಿಗಳಿಂದ ತ್ಯಾಜ್ಯ ತೆಗೆಯಲು ಕೆಲಸ ಆರಂಭಿಸಲಾಗಿದೆ. ಘಟಕ ಕ್ಲಿಯರ್ ಆದ ಕೂಡಲೇ ಮನೆಗಳಿಂದಲೂ ವಿಲೇವಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಪಿಡಿಒ ಆಶಾ ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here