







ಕಾಣಿಯೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಚಾರ್ವಾಕದಲ್ಲಿ 157ನೇ ಗಾಂಧಿ ಜಯಂತಿ ಮತ್ತು 122ನೇ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್ ಎಣ್ಮೂರುರವರು ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜೀವನ ಸಾಧನೆಗಳ ಬಗ್ಗೆ ಜಿಪಿಟಿ ಶಿಕ್ಷಕಿ ನಯನ ಕುಮಾರಿ ಪರಿಚಯಿಸಿದರು. ಶಾಲಾ ವಿದ್ಯಾರ್ಥಿಗಳು ಮಹಾನ್ ನಾಯಕರ ಉದಾತ್ತ ಚಿಂತನೆಗಳ ಕುರಿತು ಭಾಷಣ ಮಾಡಿದರು. ಸರ್ವಧರ್ಮ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಶಾಲಾವರಣದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.



ಎಸ್ ಡಿ ಎಂ ಸಿ ಸದಸ್ಯರಾದ ವಿಶ್ವನಾಥ ಕಂಚನ, ಚಂದಪ್ಪ ಗೌಡ ಕುಕ್ಕುನಡ್ಕ, ಸತ್ಯಪ್ರಸಾದ್,ಮೀನಾಕ್ಷಿ ಕೋಡಂದೂರು, ಚಿತ್ರಾ ನಡುಬೈಲು ಪೋಷಕರಾದ ಬಾಲಸುಬ್ರಹ್ಮಣ್ಯ ಎರ್ಬೊಳು ಉಪಸ್ಥಿತರಿದ್ದರು.ಮುಖ್ಯಗುರು ರಮೇಶ್ ಎಸ್. ಸ್ವಾಗತಿಸಿ, ಟಿಜಿಟಿ ಶಿಕ್ಷಕರಾದ ಚೆನ್ನಪ್ಪ ಗೌಡರವರು ಧನ್ಯವಾದ ಸಮರ್ಪಿಸಿದರು. ಸಹಶಿಕ್ಷಕಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.













