







ಶಿಕ್ಷಕಿ ಡಾ.ಶಾಂತಾ ಪುತ್ತೂರು ರವರಿಗೆ ಡಾ.ಶಿವರಾಮ ಕಾರಂತ ಶಿಕ್ಷಕ ಪ್ರಶಸ್ತಿ ಪ್ರದಾನ


ಪುತ್ತೂರು :ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿ ಹಾಜಿ ಅಬ್ದುಲ್ಲಾ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಂದೀಪ್ ಶೆಟ್ಟಿ ಸಾರಥ್ಯದ ಏಸ್ ಕ್ರೀಟ್ ಅಡೆಷನ್ಸ್ ಇಂಡಿಯಾ ಪ್ರೈ. ಲಿ. ಉಸಿರು ಕೋಟ ಅವರ ಆಶ್ರಯದಲ್ಲಿ ಸೆ.26ರಂದು ಕೋಟ ಕಾರಂತ ಥೀಂ ಪಾರ್ಕ್ನಲ್ಲಿ 5ನೇ ವರ್ಷದ ಡಾ| ಶಿವರಾಮ ಕಾರಂತ ಶಿಕ್ಷಕ ಪ್ರಶಸ್ತಿ ಸಮಾರಂಭ ನಡೆಯಿತು.



ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಕಬಕ ಪುತ್ತೂರಿನ ಸಾಹಿತಿ, ಶಿಕ್ಷಕಿ ಡಾ.ಶಾಂತಾ ಪುತ್ತೂರು ರವರಿಗೆ ಡಾ.ಶಿವರಾಮ ಕಾರಂತ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಆಯ್ಕೆ ಮಾಡಿದ ಶಿಕ್ಷಕರನ್ನು ಗೌರವಿಸಲಾಯಿತು. ಉಡುಪಿ ಜಿಲ್ಲೆಯ ವಿದ್ಯಾಂಗ ಉಪನಿರ್ದೇಶಕರಾದ ಲೋಕೇಶ್ ಸಿ. ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಒ. ರವೀಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾ ಪಿ. ಉಪಸ್ಥಿತರಿದ್ದು, ವೇದಿಕೆಯಲ್ಲಿ ಗೀತಾನಂದ ಫೌಂಡೇಶನ್ ನ ಆನಂದ ಸಿ. ಕುಂದರ್, ಏಸ್ ಕ್ರೀಟ್ ಅಡೆಷನ್ ನ ಸಂದೀಪ್ ಶೆಟ್ಟಿ,ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಶೋಕ ತೆಕ್ಕಟ್ಟೆ, ನಿವೃತ್ತ ಅಧಿಕಾರಿಯಾಗಿರುವ ಶಿವರಾಮ್, ಟ್ರಸ್ಟಿಗಳಾದ ಸುಬ್ರಾಯ ಆಚಾರ್ , ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯಸ್ಥರಾದ ಪ್ರೇಮಾನಂದ ಉಪಸ್ಥಿತರಿದ್ದರು.ಡಾ.ಶಾಂತಾಪುತ್ತೂರುರವರು ಈ ಸಂದರ್ಭದಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದರು.
ಶಿಕ್ಷಕ ಸಂಯೋಜಕ ಸತೀಶ ವಡ್ಡರ್ಸೆ ಸ್ವಾಗತಿಸಿದರು. ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ವಂದಿಸಿದರು. ಶಿಕ್ಷಕಿ ನಾಗರತ್ನ ಗುಂಡ್ಮಿಕಾರ್ಯಕ್ರಮ ನಿರೂಪಿಸಿದರು.










