ಪ್ರಗತಿ‌ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ನ ವಿದ್ಯಾರ್ಥಿಗಳಿಂದ ಫನ್ ಫೆಸ್ಟ್ – 2026

0

ಈ ಸಂಸ್ಥೆ ಸಮಾಜದ ಒಂದು ಆಸ್ತಿಯಾಗಬೇಕಿದೆ: ಯು.ಟಿ.ಇಫ್ತಿಕಾರ್ ಅಲಿ

ಪುತ್ತೂರು: ಗ್ರಾಮೀಣ ಭಾಗದಲ್ಲಿ ಸುಂದರವಾದ ಒಂದು ಕ್ಯಾಂಪಸ್ ನಿರ್ಮಾಣ ಮಾಡಿರುವುದು ತುಂಬಾ ಕುಶಿಯ ವಿಚಾರ. ನಿಮ್ಮ ಶಿಕ್ಷಣ ಸಂಸ್ಥೆಯಿಂದ ಇಂತಹ ಉನ್ನತ ಶಿಕ್ಷಣ‌ ನೀಡುವ ಕೆಲಸ ಇದರಿಂದ ಆಗಬೇಕಿದೆ. ಆರೋಗ್ಯ ಕ್ಷೇತ್ರದಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳ ಪಾತ್ರಗಳು ಒಂದೇ ಆಗಿದೆ. ನಿಮ್ಮ ವೃತ್ತಿಯಲ್ಲಿ ಡಿಸಿಪ್ಲೀನ್ ಅತೀ ಅಗತ್ಯ.
ಎಲ್ಲೇ ಹೋಗಿ ಗೌರವಯುತವಾಗಿ ನಡೆಯುವ ಗುಣ‌ ನಿಮ್ಮದಾಗಲಿ. ನೀವು ಉತ್ತಮ‌ಕೆಲಸ ಮಾಡಿದಲ್ಲಿ ಎಲ್ಲರೂ ಗುರುತಿಸುತ್ತಾರೆ. ಎಲ್ಲಾ ಭಾಗದ ಜನರಿಗೆ ಇದೆ ಕೇಂದ್ರ ಸ್ಥಾನವಾಗಿದೆ. ಈ ಸಂಸ್ಥೆ ಸಮಾಜದ ಒಂದು ಆಸ್ತಿಯಾಗಬೇಕಿದೆ. ಸಂಸ್ಥೆಗೆ ಸದಾ ನಮ್ಮಿಂದಾಗುವ ಸಹಕಾರವನ್ನು ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ನ ಅಧ್ಯಕ್ಷರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಯು.ಟಿ.ಇಫ್ತಿಕಾರ್ ಅಲಿರವರು ಹೇಳಿದರು.

ಅವರು ಪುತ್ತೂರಿನ ಕೊಟೇಜಾ ಸಭಾಂಗಣದಲ್ಲಿ ನಡೆದ ಪ್ರಗತಿ‌ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ನ ವತಿಯಿಂದ ಪ್ರಗತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್, ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಪ್ರಗತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ನ ವಿದ್ಯಾರ್ಥಿಗಳಿಂದ ನಡೆದ ಫನ್ ಫೆಸ್ಟ್ – 2026 ವಾರ್ಷಿಕ ಕಲೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಎಂ.ದತ್ತಾತ್ರೇಯ ರಾವ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಒಂದು ಸುಂದರ ವೇದಿಕೆ ಇದಾಗಿದೆ‌.ಶಿಕ್ಷಣ ಶಿಕ್ಷೆ ಯಾಗಬಾರದು. ಶಿಕ್ಷಣ ಬದುಕಿನ ಬೆಳವಣಿಗೆಗೆ ಪೂರಕ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಒಳಗಿರುವ ಕಲೆಯನ್ನು ಹೊರಹಾಕಲು ಸಹಕಾರಿ. ಫನ್ ಫೆಸ್ಟ್ ಅನ್ನು ಎಂಜೋಯ್ ಮಾಡಿ ಎಂದರು.

ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿ ಡಾ‌.ಸುದಾ ಎಸ್.ರಾವ್ ರವರು‌ ಮಾತನಾಡಿ ಸುಮಾರು ನಾಲ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. ದೇವದ ದಯೆಯಿಂದ ಸಂಸ್ಥೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಕಠಿಣ‌ ಪರಿಶ್ರಮದಿಂದ ಯಶಸ್ಸು‌‌ ಸಾಧ್ಯ ಎಂದರು.

ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಯು. ಶ್ರೀಪತಿ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು‌. ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ನ ಅಧ್ಯಕ್ಷರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಯು.ಟಿ.ಇಫ್ತಿಕಾರ್ ಅಲಿರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು‌.ಸಂಸ್ಥೆಯಲ್ಲಿ ಸಾಧನೆಗೈದ ಎ. ಆರ್. ತೃಪ್ತಿ, ಅಜಿತಾ ಎ.ರವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು‌.

ಪ್ರಗತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ನ ಉಪಪ್ರಾಂಶುಪಾಲೆ ಚೈತ್ರ ಕೆ., ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಪ್ರಾಂಶುಪಾಲರಾದ ಮಾನಸ, ಪ್ರಗತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ನ ಪ್ರಾಂಶುಪಾಲರಾದ ಹೇಮಲತಾ ರವರು ವಾರ್ಷಿಕ‌ ವರದಿ ವಾಚಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ್ ಕುಮಾರ್ ಹಾಗೂ ವಿದ್ಯಾರ್ಥಿ ನಾಯಕ ಸಂದೀಪ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು‌.

ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ ಸ್ವಾಗತಿಸಿದರು.ಅನಿತಾ ವಂದಿಸಿದರು. ರೇಷ್ಮಾ , ವರದ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ವೈವಿಧ್ಯ ನಡೆಯಿತು.

ಕಲಿಕೆಗಿಂತ ಅನುಭವ ಮುಖ್ಯ
ಉತ್ತಮ ಯೋಚನೆಯೊಂದಿಗೆ ಆರಂಭಿಸಿದ ಸಂಸ್ಥೆ ಬೆಳದಿದೆ. ಜನರ ಅಗತ್ಯತೆ ಗಳನ್ನು‌ ಮನಗಂಡು ಸಂಸ್ಥೆ ಸ್ಥಾಪನೆಯಾಗಿದೆ. ಕ್ವಾಲಿಪೈಡ್ ಸ್ಟೂಡೆಂಟ್ಸ್ ಮೆಡಿಕಲ್ ಫೀಲ್ಡ್ ನ ಆಸ್ತಿ. ಕಲಿಕೆಗಿಂತ ಅನುಭವ ಮುಖ್ಯ. ಈ ಶಿಕ್ಷಣ‌ ಸಂಸ್ಥೆ ಗ್ರಾಮೀಣ ಭಾಗದ ಜನರಿಗೆ ತಲುಪಿದೆ. ನಮ್ಮ ಆರೋಗ್ಯ ಸೇವೆಯಲ್ಲಿ ಪುತ್ತೂರು ರೋಟರಿಯ ಪಾತ್ರ ಬಹಳಷ್ಠಿದೆ. ನಮ್ಮ ಧ್ಯೇಯ ಪುತ್ತೂರಿನ ಜನತೆಗೆ ತಲುಪಲಿ.
ಡಾ.ಯು. ಶ್ರೀಪತಿ ರಾವ್
ಅಧ್ಯಕ್ಷರು
ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್ ನ

LEAVE A REPLY

Please enter your comment!
Please enter your name here