ನಳೀಲು : ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾ ಷಷ್ಠಿ ಮಹೋತ್ಸವ -ಜಾತ್ರೋತ್ಸವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ

0

ಡಿ.14 ರಂದು ಪಂಚಮಿ ಉತ್ಸವ, ಡಿ.15 : ಚಂಪಾ ಷಷ್ಠಿ ಮಹೋತ್ಸವ 

ಪುತ್ತೂರು ‌: ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯಲಿರುವ ಚಂಪಾ ಷಷ್ಠಿ ಮಹೋತ್ಸವ ,ಜಾತ್ರೋತ್ಸವದ‌‌ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಅ.4ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಡಿ.14 ಮತ್ತು 15 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಕೈಗೊಳ್ಳಬೇಕಾದ ಸಿದ್ಧತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಷಷ್ಠಿ ವೃತದವರಿಗೆ ಪ್ರತ್ಯೇಕ ವ್ಯವಸ್ಥೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ, ಅನ್ನಸಂತರ್ಪಣೆ ವಿಭಾಗದ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು.

ಉತ್ಸವದ ಬಗ್ಗೆ ಭಕ್ತಾದಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.ಡಿ.14ರಂದು ಪಂಚಮಿ ಉತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮ,ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ,ನವಕ ಕಲಶಪೂಜೆ,ಆಶ್ಲೇಷ ಬಲಿ,ಶ್ರೀ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ,ಪಂಚಗವ್ಯಾಭಿಷೇಕ,ನವಕ ಕಲಶಾಭಿಷೇಕ,ದೈವಗಳಿಗೆ ತಂಬಿಲ,ನಾಗದೇವರಿಗೆ ಪಂಚಾಮೃತ ಅಭಿಷೇಕ,ತಂಬಿಲ ಸೇವೆ ಮಹಾಪೂಜೆ, ಅನ್ನಸಂತರ್ಪಣೆ ,ಸಂಜೆ ಅಂಕತಡ್ಕ ಸುಮಚರಣ ನಾಟ್ಯಾಲಯದ ಮಕ್ಕಳಿಂದ ಭರತನಾಟ್ಯ ನಡೆಯಲಿದೆ. ಬಳಿಕ ದೈವಗಳ ಭಂಡಾರ ತೆಗೆದು ಶ್ರೀ ದೇವರಿಗೆ ರಂಗಪೂಜೆ,ಶ್ರೀ ದೇವರ ಬಲಿಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ,ರಾತ್ರಿ ದೇವದಾಸ್ ಕಾಪಿಕಾಡ್ ಅವರ ಚಾಪರ್ಕ ತಂಡದಿಂದ  ನಾಟಕ, ಸಾರ್ವಜನಿಕ ಅನ್ನ ಸಂತರ್ಪಣೆ, ಡಿ.15ರಂದು  ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ದರ್ಶನ ಬಲಿ,ಬಟ್ಟಲು ಕಾಣಿಕೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ,ಮಹಾಪೂಜೆ,ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.ಸಂಜೆ ವ್ಯಾಘ್ರ ಚಾಮುಂಡಿ ನೇಮೋತ್ಸವ, ರುದ್ರ ಚಾಮುಂಡಿ ನೇಮೋತ್ಸವ ನಡೆಯಲಿದೆ.

ಸಭೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರವೀಣ್ ಶಂಕರ್ , ಮೊಕ್ತೇಸರರಾದ ಮೋಹನದಾಸ ರೈ ನಳೀಲು, ಪ್ರವೀಣ್ ಕುಮಾರ್ ರೈ ನಳೀಲು, ಅರುಣ್ ಕುಮಾರ್ ರೈ ನಳೀಲು, ಸತೀಶ್ ರೈ ನಳೀಲು, ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ,ಪದ್ಮಪ್ರಸಾದ್ ರೈ ಕಲಾಯಿ,ಸುರೇಶ್ ಭಟ್ ಅಂಕತಡ್ಕ, ವಿನಯಚಂದ್ರ ಕೆಳಗಿನಮನೆ ಪಾಲ್ತಾಡಿ, ವಿನೋದ್ ಶೆಟ್ಟಿ ಪಾಲ್ತಾಡಿ ಧರ್ಖಾಸು,ಕೆ.ವಿ.ಗಣೇಶ್ ಪೆರುವಾಜೆ,ಧನಂಜಯ ಕೆ.ಎಂ.ಕಾಯರಗುರಿ,ರೋಶನ್ ಬಂಗೇರ ಬಾಲಾಯ,ಹರೀಶ್ ಮಾಡಾವು,ಪುಟ್ಟಣ್ಣ ನಾಯ್ಕ ಚೆನ್ನಾವರ,ಗೋಪಾಲ ಆಚಾರ್ಯ ನಳೀಲು,ಸತ್ಯವತಿ,ಸುಪ್ರಿತ್ ರೈ ನಳೀಲು,ಚಂದ್ರಾವತಿ,ನವೀನ್ ಪಾಲ್ತಾಡು,ಮಹೇಶ್ ಮಣಿಯಾಣಿ,ಕಿರಣ್ ಪ್ರಸಾದ್ ಕುಂಡಡ್ಕ,ಭಾಸ್ಕರ ಕುಂಡಡ್ಕ,ಪ್ರಜ್ವಲ್ ರೈ ಚೆನ್ನಾವರ ಪಟ್ಟೆ ಮೊದಲಾದವರಿದ್ದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ವಂದಿಸಿದರು.

ಎಲ್ಲರ ಸಹಕಾರ ಅಗತ್ಯ  ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ತುಂಬು ಸಹಕಾರ ನೀಡುತ್ತಿದ್ದಾರೆ.ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಅನುಕೂಲವಾಗುವಂತೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಉತ್ಸವದ ಸಂದರ್ಭದಲ್ಲಿ ಷಷ್ಠಿ ವೃತದಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ.ಷಷ್ಠಿ ಮಹೋತ್ಸವ ಹಾಗೂ ಜಾತ್ರೋತ್ಸವ ಯಶಸ್ವಿ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ. ಸಂತೋಷ್ ಕುಮಾರ್ ರೈ ನಳೀಲು  ಆಡಳಿತ ಮೊಕ್ತೇಸರರು ಹಾಗೂ ಅಧ್ಯಕ್ಷರು ಅಭಿವೃದ್ಧಿ ಸಮಿತಿ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

LEAVE A REPLY

Please enter your comment!
Please enter your name here