







ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬಲ್ನಾಡು ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕಬಕ, ಕಬಕ ಎ ಮತ್ತು ಕೊಡಿಪಾಡಿ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಅ.4 ರಂದು ಮುರ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ವಲಯ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ವಹಿಸಿದ್ದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಸತೀಶ್ ಪರ್ಲಡ್ಕ ಉದ್ಘಾಟಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಶಶಿಧರ ಎಂ, ಪುತ್ತೂರು ವಿವೇಕಾನಂದ ಕಾನೂನು ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಅಕ್ಷತಾ ಎ.ಪಿ, ಕೊಡಿಪ್ಪಾಡಿ ಶ್ರೀ ಜನಾರ್ಧನ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧೀರ್ ಪ್ರಸಾದ್ ಎ, ಮುರ ಒಕ್ಕಲಿಗ ಗೌಡ ಸಮುದಾಯ ಭವನದ ಅಧ್ಯಕ್ಷ ನಾರಾಯಣ ಗೌಡ ಮುರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.



ಮೂರು ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ನಿಕಟ ಪೂರ್ವ ಪದಾಧಿಕಾರಿಗಳು ತಾಂಬೂಲ ಮತ್ತು ದಾಖಲಾತಿ ಪುಸ್ತಕ ಹಸ್ತಾಂತರಿಸುವ ಮೂಲಕ ಒಕ್ಕೂಟದ ಪದಗ್ರಹಣ ನಡೆಯಿತು.ಜ್ಞಾನ ಜ್ಯೋತಿ ತಂಡದ ಸದಸ್ಯ ಮಿಥುನ್ ರಾಜ್ ಪ್ರಾರ್ಥಿಸಿ, ವಲಯ ಮೆಲ್ವೀಚಾರಕ ಪ್ರಶಾಂತ್ ಕುಮಾರ್ ಸ್ವಾಗತಿಸಿದರು. ಮೂರು ಒಕ್ಕೂಟಗಳ ನಾಲ್ಕು ವರ್ಷದ ಸಾಧನಾ ವರದಿಯನ್ನು ಸೇವಾ ಪ್ರತಿನಿಧಿ ಚಿತ್ರ ವಾಚಿಸಿದರು.ಕಬಕ ಸೇವಾ ಪ್ರತಿನಿಧಿ ನಳಿನಿ ವಂದಿಸಿದರು. ಶೃತಿ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ನಿಕಟ ಪೂರ್ವ ಪದಾಧಿಕಾರಿಗಳು ಹಾಗೂ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು, ಶೌರ್ಯ ವಿಪತ್ತು ತಂಡದ ಸದಸ್ಯರು, ಭಾಗವಹಿಸಿದ್ದರು.ನಂತರ ತಂಡದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.










