ಮೈಸೂರು ದಸರಾ ‘ಯುವ ಸಂಭ್ರಮ’ : 2ನೇ ಬಾರಿಗೆ ಸಂವಿಧಾನ ಪೀಠಿಕೆ ಹಾಡಿ ಮನ ಗೆದ್ದ ಪುತ್ತೂರಿನ ಬಾಲ ಪ್ರತಿಭೆ ಸೋನಿಕಾ ಜನಾರ್ಧನ್

0

ಪುತ್ತೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾದ ’ಯುವ ಸಂಭ್ರಮ’ ಕಾರ್ಯಕ್ರಮದಲ್ಲಿ ಪುತ್ತೂರಿನ ಬಾಲ ಪ್ರತಿಭೆ ಸೋನಿಕಾ ಜನಾರ್ಧನ್ ಎರಡನೇ ಬಾರಿಗೆ ಭಾರತೀಯ ಸಂವಿಧಾನದ ಪೀಠಿಕೆಯನ್ನು ಗಾಯನ ಮಾಡುವ ಮೂಲಕ ಸಾವಿರಾರು ಪ್ರೇಕ್ಷಕರ ಅಪಾರ ಜನಮೆಚ್ಚುಗೆಗೆ ಪಾತ್ರಳಾಗಿದ್ದಾರೆ.

ಈಗಾಗಲೇ ರಾಜ್ಯಾದ್ಯಂತ ’ಭಾರತೀಯ ಸಂವಿಧಾನದ ಪೀಠಿಕೆ ಗಾಯನ’ ಅಭಿಯಾನವನ್ನು ನಡೆಸಿರುವ ಈಕೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಶಾಸಕ ಅಶೋಕ್ ರೈ ಸೇರಿದಂತೆ ಹಲವು ಗಣ್ಯರಿಂದ ಪ್ರಶಂಸೆ ಮತ್ತು ಅಭಿನಂದನೆಗಳನ್ನು ಪಡೆದುಕೊಂಡಿದ್ದಾರೆ.

ಸೋನಿಕಾ ಮಂಗಳೂರಿನ ಎ.ಪಿ.ಪಿ. ಜನಾರ್ಧನ್ ಪುತ್ತೂರು ಹಾಗೂ ಶಿಕ್ಷಕಿ ಪ್ರಮೀಳಾ ಜನಾರ್ಧನ್ ದಂಪತಿಯ ಪುತ್ರಿಯಾಗಿದ್ದು, ಪ್ರಸ್ತುತ ಎ.ವಿ.ಜಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮವನ್ನು ಯುವ ವಕೀಲರಾದ ಹೇಮಾ ಅವರು ಸಂಯೋಜಿಸಿದ್ದು, ನಿಂಗರಾಜು ಅವರು ನಿರೂಪಣೆ ಮಾಡಿದರು. ದಸರಾ ಯುವ ಸಂಭ್ರಮದ ಅಧ್ಯಕ್ಷರಾದ ರಾಕೇಶ್, ಕಾರ್ಯಾಧ್ಯಕ್ಷರಾದ ಪ್ರತಿಭಾ ಹಾಗೂ ಸಮಿತಿಯ ಸದಸ್ಯರು ಬಾಲ ಪ್ರತಿಭೆಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸಂವಿಧಾನದ ಪೀಠಿಕೆಯನ್ನು ಅದ್ಭುತವಾಗಿ ಪ್ರಸ್ತುತಪಡಿಸಿದ ಸೋನಿಕಾಳ ಪ್ರತಿಭೆಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತು ಚಾಮರಾಜನಗರ ಸಂಸದರಾದ ಸುನಿಲ್ ಬೋಸ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here