







ಉಪ್ಪಿನಂಗಡಿ: ದುರ್ಗಾಗಿರಿ ಶ್ರೀ ದುರ್ಗಾ ಭಜನಾ ಮಂದಿರವು ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಭಜನಾ ಸೇವೆಯೊಟ್ಟಿಗೆ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳ ಚಟುವಟಿಕೆಗಳಿಗೆ ಪುತ್ತೂರು ತಾಲೂಕಿನ ಶ್ರೇಷ್ಠ ಭಜನಾ ಮಂಡಳಿ ಎಂಬ ಸಾಧಕ ಪ್ರಶಸ್ತಿಯನ್ನು ಪಡೆದಿದೆ.



ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಈ ಪ್ರಶಸ್ತಿ ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 28ನೇ ವರ್ಷದ ಭಜನಾ ಕಮ್ಮಟದಲ್ಲಿ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ನೀಡಿ ಆಶೀರ್ವದಿಸಿದರು.













