







ಪುತ್ತೂರು: ವಿಜ್ಞಾನ ವಿಹಾರ ವಿದ್ಯಾಸಂಸ್ಥೆ ನಾಟುಕ್ಕಿ, ವಿಜಯವಾಡ, ಆಂಧ್ರಪ್ರದೇಶದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಗಣಿತ-ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವದಲ್ಲಿ ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ 10ನೇ ತರಗತಿಯ ವಿದ್ಯಾರ್ಥಿ ಭಾರವಿ. ಕೆ. ಭಟ್ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.


ಇವರು ಡಾ. ರವಿಪ್ರಕಾಶ್ ಕೆ. ಮತ್ತು ಡಾ. ವಿಜಯ ಸರಸ್ವತಿ ಬಿ. ದಂಪತಿಯ ಪುತ್ರ. ಇವರಿಗೆ ಹಾಗೂ ಸ್ಪರ್ಧೆಯ ತಯಾರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕ ವರ್ಗದವರಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.













