ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಮಹಿಳಾ/ಯುವ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು:ಮರಾಟಿ ಸಮಾಜ ಸೇವಾ ಸಂಘ(ರಿ.) ಕೊಂಬೆಟ್ಟು ಪುತ್ತೂರು ಇದರ ಆಶ್ರಯದ ಅಂಗ ಸಂಸ್ಥೆಯಾದ ಮರಾಟಿ ಮಹಿಳಾ ಹಾಗೂ ಯುವ ವೇದಿಕೆಯ 2026-27ರ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ರಚನೆ ಇತ್ತೀಚೆಗೆ ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.


ಮರಾಟಿ ಸಮಾಜ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು, ಕಾರ್ಯದರ್ಶಿಯಾಗಿ ಲಲಿತಾ ಅಶೋಕ್ ಬಲ್ನಾಡು, ಕೋಶಾಧಿಕಾರಿಯಾಗಿ ಪ್ರೇಮ ಟಿ.ನಾಯ್ಕ, ಉಪಾಧ್ಯಕ್ಷರಾಗಿ ಮೀನಾಕ್ಷಿ ಮಂಜುನಾಥ, ಜೊತೆ ಕಾರ್ಯದರ್ಶಿಯಾಗಿ ಸಾವಿತ್ರಿ ಶೀನಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೇಖಾ ಎಸ್, ಕ್ರೀಡಾ ಕಾರ್ಯದರ್ಶಿಯಾಗಿ ಸುಬ್ಬಕ್ಕ ಮೋಹನ್, ಸಂಘಟನಾ ಕಾರ್ಯದರ್ಶಿಗಳಾಗಿ ಲತಾ ಈಶ್ವರ ನಾಯ್ಕ, ಶ್ಯಾಮಲಾ ಗಂಗಾಧರ್, ಲತಾ ಗೋವಿಂದ ನಾಯ್ಕ, ರೇವತಿ ಶಿವಪ್ಪ ನಾಯ್ಕ, ಭಜನಾ ಸಂಚಾಲಕರಾಗಿ ವಸಂತಿ ಪರಮೇಶ್ವರ್ ಪಾಂಗ್ಲಾಯಿ ಹಾಗೂ ಕಾರ್ಯಕಾರಿ ಸಮಿತಿಗೆ 33 ಮಂದಿ ಮಹಿಳೆಯರನ್ನು ಆರಿಸಲಾಯಿತು.


ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲುರವರು ನಿಕಟಪೂರ್ವ ಕಾರ್ಯದರ್ಶಿಯಾಗಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸ್ಸಿದ್ದರು. ಮಾತ್ರವಲ್ಲ ಜಿಲ್ಲಾ ಪ್ರಶಸ್ತಿ ವಿಜೇತ ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಇವರ ಶಿಷ್ಯೆಯಾಗಿ ಕಳೆದ ಹನ್ನೆರಡು ವರ್ಷಗಳಿಂದ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥದಾರಿಯಾಗಿ, ಲಯನ್ಸ್ ಕ್ಲಬ್ ಪುತ್ತೂರಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾರ್ಯದರ್ಶಿಯಾಗಿ ಆಯ್ಕೆಯಾದ ಲಲಿತಾ ಅಶೋಕ್ ಬಲ್ನಾಡು ಸದರಿ ಸಂಘದ ಕೋಶಾಧಿಕಾರಿಯಾಗಿ ಹಾಗೂ ಯೋಗ ಶಿಕ್ಷಣ ಶಿಕ್ಷಕಿಯಾಗಿ ಗುರುತಿಸಿಕೊಂಡಿರುತ್ತಾರೆ. ಕೋಶಾಧಿಕಾರಿಯಾಗಿ ಆಯ್ಕೆಯಾದ ಶ್ರೀಮತಿ ಪ್ರೇಮ ಟಿ.ನಾಯ್ಕರವರು ಸದರಿ ಸಂಘದ ಭಜನಾ ಸಂಘದ ನಿಕಟಪೂರ್ವ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು.


ಮರಾಟಿ ಯುವ ವೇದಿಕೆ:
ಮರಾಟಿ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಸಂದೀಪ್ ಆರ್ಯಾಪು, ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಕೆ. ಕಾಪುತಮೂಲೆ, ಕೋಶಾಧಿಕಾರಿಯಾಗಿ ಗಂಗಾಧರ ಪಾಣಾಜೆ ಆಯ್ಕೆಯಾದರು. ಇನ್ನುಳಿದಂತೆ ಉಪಾಧ್ಯಕ್ಷರಾಗಿ ಶ್ರೀನಿವಾಸ ಮಠಂತಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ವಸಂತ ಆರ್ಯಾಪು, ಕ್ರೀಡಾ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಕೆ. ಎಂ ಪುಣ್ಚಪ್ಪಾಡಿ ಮತ್ತು ಜಗದೀಶ್ ಎಲಿಕ,, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಹರ್ಷಿತಾ ಬಿ.ಟಿ ಶೇವಿರೆ, ಮತ್ತು ತೇಜಸ್ ಎಂ. ಆರ್, ಭಜನಾ ಉಸ್ತುವಾರಿಯಾಗಿ ವೆಂಕಪ್ಪ ಬರೆಪ್ಪಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ, ರವೀಶ್ ತಾರಿಗುಡ್ಡೆ, ವಿಜಯ ಮಠಂತಬೆಟ್ಟು, ಗೋಪಾಲ ಪಡುಮಲೆ, ಸದಸ್ಯರಾಗಿ, ಆಕಾಶ್ ನೆಹರುನಗರ, ನವೀನ್ ಎರ್ಕಮೆ, ಕುಸುಮಾಧರ. ಅಶ್ವಿನಿ ಸಿ.ಎಚ್ ಚಾಕೊಟೆ, ಸ್ವಾತಿ ಬೊಳಿಂಜ, ಸೌಜನ್ಯ ಬೊಳಿಂಜ, ಹರ್ಷತಾ ಎನ್ ಸಾಲ್ಮರ, ಪ್ರಣತಿ. ಬಿ, ನವೀನ್ ಮೈರ, ಅಶ್ವಿತಾ ಜರಿನಾರು, ಜಸ್ಮಿತಾ ಜರಿನಾರು, ನಮ್ರತಾ. ಡಿ ಕೈಕಾರ, ಮಮತಾ ಎಸ್. ಪಂಜಿಗ, ಭೂಮಿಕಾ, ದೀಕ್ಷಾ ನಾಯ್ಕ, ನವ್ಯಶ್ರೀ. ಕೆ ಆಯ್ಕೆಯಾದರು. ಮಾತೃಸಂಘದ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ನಾಯ್ಕ ಕೇಪುಳುರವರು ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.

LEAVE A REPLY

Please enter your comment!
Please enter your name here