ಭಾರೀ ಮಳೆಗೆ ಆನೆಮಜಲು ಕೋರ್ಟ್ ಬಳಿಯ ಆವರಣ ಗೋಡೆ ಕುಸಿತ

0

ಪುತ್ತೂರು: ಇಂದು (ಅ.07) ಸಂಜೆ ಸುರಿದ ಭಾರೀ ಮಳೆಗೆ ಆನೆಮಜಲು ಕೋರ್ಟ್ ಬಳಿಯ ಆವರಣ ಗೋಡೆ ಕುಸಿತಗೊಂಡ ಘಟನೆ ನಡೆದಿದೆ.

ಕೋರ್ಟ್ ಬಳಿಯ ಅಂಗನವಾಡಿ ಕಟ್ಟಡ ಸಮೀಪದ ಆವರಣ ಗೋಡೆ ಕುಸಿತಕ್ಕೊಳಗಾಗಿ ರಸ್ತೆಗೆ ಬಿದ್ದಿದೆ. ಇದರಿಂದ ಆನೆಮಜಲು ದೈಯಾರಮಾಡ ರಸ್ತೆ ಬ್ಲಾಕ್ ಆಗಿದೆ. ಇನ್ನೊಂದು ಬದಿಯ ಆವರಣ ಗೋಡೆಯೂ ಕುಸಿಯುವ ಹಂತದಲ್ಲಿದೆ.


ಕಳಪೆ ಕಾಮಗಾರಿ ಆರೋಪ:

ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡ ನ್ಯಾಯಲಯ ಸಂಕಿರ್ಣ ಇದೀಗ ಒಂದು ಮಳೆಗಾಲ ಮುಗಿಯುವುದರ ಒಳಗಾಗಿ ಆವರಣ ಗೋಡೆ ಕುಸಿತಕ್ಕೆ ಒಳಗಾಗಿರುವುದರಿಂದ ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ.

LEAVE A REPLY

Please enter your comment!
Please enter your name here