







ಪುತ್ತೂರು: ಪುತ್ತೂರು ಹಾಗೂ ಕಡಬ ತಾಲೂಕಿನ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಯುನಿಯನ್ ಸಭೆಯು ಯುನಿಯನ್ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಕೋಡಿಂಬಾಡಿ ಅವರ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿ ಯುನಿಯನ್ ಕಾರ್ಯದರ್ಶಿ ಗೀತಾ ಜಿ. ಎಸ್ ಸವಣೂರು, ಜೊತೆ ಕಾರ್ಯದರ್ಶಿ ಸವಿತಾ ಬೆಳಂದೂರುರವರು ಉಪಸ್ಥಿತರಿದ್ದರು.


ಸಭೆಯಲ್ಲಿ ಸಮುದಾಯ ಬಂಡವಾಳ ನಿಧಿ ಬಗ್ಗೆ ಚರ್ಚಿಸಿ (CIF) ಸಾಲದ ಆದೇಶದಲ್ಲಿ ಒಂದು ಸಂಘಕ್ಕೆ ಸಾಲ ವಿತರಣೆ ಮಾಡಿದ ನಂತರ ಪೂರ್ಣ ಪ್ರಮಾಣದಲ್ಲಿ ಮರುಪಾವತಿ ಆದ ನಂತರ ಆ ಸಂಘಕ್ಕೆ ಸಾಲ ಕೊಡಬೇಕೆಂದಿದ್ದು ಹಾಗೆ ಮಾಡಿದಲ್ಲಿ ಸ್ವ ಉದ್ಯೋಗ ಮಾಡುವ ಸದಸ್ಯರಿಗೆ ಸಮಸ್ಯೆಯಾಗುತ್ತದೆ. ಈ ಆದೇಶವನ್ನು ಬದಲಾವಣೆ ಮಾಡಬೇಕೆಂದು ಜಿಲ್ಲಾ ಯುನಿಯನ್ ಮುಖಾಂತರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ನೀಡುವುದೆಂದು ತೀರ್ಮಾನ ಮಾಡಲಾಯಿತು.




ಘನ ತ್ಯಾಜ್ಯ ನಿರ್ವಹಣೆ ವಿಲೇವಾರಿಯನ್ನು ಒಕ್ಕೂಟದ ಮುಖಾಂತರ ನಿರ್ವಹಣೆ ಮಾಡುತ್ತಿದ್ದು ಪ್ರತಿ ಮನೆಯಿಂದ ಕಡ್ಡಾಯವಾಗಿ ಕಸ ನೀಡುವುದು ಹಾಗೂ ಸ್ವಚ್ಛತೆ ಶುಲ್ಕ ನೀಡಲು ಗ್ರಾಮ ಪಂಚಾಯತ್ ನಿಂದ ಕ್ರಮ ವಹಿಸಿಕೊಳ್ಳುವುದು ಘನ ತ್ಯಾಜ್ಯ ಘಟಕದ ಮೇಲ್ವಿಚಾರಕರಿಗೆ ಪಂಚಾಯತ್ ನಿಂದ ಗೌರವಧನ ನೀಡಬೇಕು ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ನೀಡುವುದೆಂದು ತೀರ್ಮಾನ ಮಾಡಲಾಯಿತು . ಯುನಿಯನ್ ಸದಸ್ಯತ್ವ ಶುಲ್ಕ ಪ್ರತಿ ವರ್ಷ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ಜಿಲ್ಲಾ ಯುನಿಯನ್ ಸಭೆಗೆ ಹಾಜರಾಗುವ ಬಗ್ಗೆ ಹೋರಾಟದಲ್ಲಿ ಭಾಗವಹಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ತೀರ್ಮಾನ ಮಾಡಿದಂತೆ ಪ್ರತಿ ಒಕ್ಕೂಟದಿಂದ ಎಂ ಬಿ ಕೆ, ಎಲ್ ಸಿ ಆರ್ ಪಿ ಹಾಗೂ ಸಖಿಗಳಿಗೆ ಯೂನಿಯನ್ ಗೆ ಸಹಕರಿಸುವುದು, ಯೂನಿಯನ್ ಗೆ ಬೆಂಬಲ ನೀಡದೆ ಇದ್ದ ಎಂ ಬಿ ಕೆ ಎಲ್ ಸಿ ಆರ್ ಪಿ ಹಾಗೂ ಸಖಿಗಳಿಗೆ ಯೂನಿಯನ್ ನಿಂದ ಯಾವುದೇ ಸಹಕಾರ ನೀಡ ಬಾರದು ಎಂದು ತೀರ್ಮಾನಿಸಲಾಯಿತು.
ಪ್ರತಿ ಒಕ್ಕೂಟ ದಿಂದ ಎಂ ಬಿ ಕೆ, ಎಲ್ ಸಿ ಆರ್ ಪಿ ಗಳು ಹಾಗೂ ಸಖಿಗಳು ಸದಸ್ಯತ್ವ ಶುಲ್ಕವನ್ನು ನೀಡಿದ ಬಳಿಕ ಬ್ಯಾಂಕ್ ಖಾತೆಗೆ ಜಮೆ ಮಾಡುವುದು ಎಂದು ತೀರ್ಮಾನಿಸಲಾಯಿತು. ಕಳೆದ ವರ್ಷ ಖರ್ಚು ವೆಚ್ಚಗಳ ಲೆಕ್ಕಾಚಾರವನ್ನು ಓದಿ ಹೇಳಲಾಯಿತು. ನಂತರ ಯುನಿಯನ್ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.










