ಭಾರತೀಯ ವಾಯುಪಡೆ ದಿನ – ದೇಶಸೇವೆ ಮತ್ತು ಯುವಜನತೆಗೆ ಸುವರ್ಣಾವಕಾಶ

0

ಪ್ರತಿ ವರ್ಷ ಅ: 8 ರಂದು ಭಾರತದಾದ್ಯಂತ ‘ಭಾರತೀಯ ವಾಯುಪಡೆ ದಿನ’ ವನ್ನು ಅತ್ಯಂತ ಹೆಮ್ಮೆ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಭಾರತದ ಮುಗಿಲನ್ನು ಶತ್ರುಗಳ ಕಣ್ಣಿನಿಂದ ರಕ್ಷಿಸುವ, ರಾಷ್ಟ್ರದ ಗಡಿ ಕಾಯುವ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ದೇಶವಾಸಿಗಳ ನೆರವಿಗೆ ಧಾವಿಸುವ ಭಾರತೀಯ ವಾಯುಪಡೆಯು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಹಾಗೂ ಗೌರವಾನ್ವಿತ ಪಡೆಗಳಲ್ಲಿ ಒಂದಾಗಿದೆ.

ಭಾರತೀಯ ವಾಯುಪಡೆಯು 1932 ರ ಅ: 8 ರಂದು ಸ್ಥಾಪನೆಯಾಯಿತು. ಪ್ರಾರಂಭದಲ್ಲಿ ಸಣ್ಣ ಮಟ್ಟದಲ್ಲಿ ರೂಪುಗೊಂಡ ಈ ಪಡೆ, ಇಂದು ಅತ್ಯಾಧುನಿಕ ಯುದ್ಧ ವಿಮಾನಗಳಾದ ರಫೇಲ್, ಸುಖೋಯ್-30 MKI, ತೇಜಸ್, ಮಿರಾಜ್ ಮತ್ತು ಪ್ರಚಂಡ ಯುದ್ಧ ಹೆಲಿಕಾಪ್ಟರ್‌ಗಳನ್ನು ಹೊಂದಿರುವ ಮಹಾನ್ ಶಕ್ತಿಯಾಗಿ ಬೆಳೆದಿದೆ. 1947, 1965, 1971 ಮತ್ತು 1999 ರ ಕಾರ್ಗಿಲ್ ಯುದ್ಧಗಳಲ್ಲಿ ಭಾರತೀಯ ವಾಯುಪಡೆ ತೋರಿದ ಸಾಹಸ ಮತ್ತು ಶೌರ್ಯ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ.

ರೋಮಾಂಚನಕಾರಿ ಜೀವನ, ಉನ್ನತ ಸಮಾಜಮುಖಿ ಗೌರವ ಮತ್ತು ದೇಶಸೇವೆಯ ಕನಸು ಕಾಣುವ ಯುವಕ-ಯುವತಿಯರಿಗೆ ಭಾರತೀಯ ವಾಯುಪಡೆ ಅಪ್ರತಿಮ ವೇದಿಕೆಯಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ಮುಗಿಸಿದ ಯುವಕರಿಗೆ ಹಲವು ವಿಭಾಗಗಳಲ್ಲಿ ಅವಕಾಶಗಳಿವೆ.


ಅಗ್ನಿವೀರ್ ವಾಯು – ಅರ್ಹತೆ: 10+2 (ಪಿಯುಸಿ) ಯಲ್ಲಿ ಗಣಿತ, ಭೌತಶಾಸ್ತ್ರ ಹಾಗೂ ಇಂಗ್ಲಿಷ್‌ನಲ್ಲಿ ಕನಿಷ್ಠ 50% ಅಂಕಗಳು (ಅಥವಾ ಯಾವುದೇ ವಿಷಯದಲ್ಲಿ ಪಿಯುಸಿ/ಡಿಪ್ಲೊಮಾ). ‘ಅಗ್ನಿಪಥ್’ ಯೋಜನೆಯಡಿ ನಾಲ್ಕು ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಅವಕಾಶ. ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗಗಳಲ್ಲಿ ಯುವಕ-ಯುವತಿಯರಿಬ್ಬರಿಗೂ ಪ್ರವೇಶವಿದೆ.


ಎನ್‌ಡಿಎ (National Defence Academy) – ಅರ್ಹತೆ: ಪಿಯುಸಿ (10+2) ವಿಜ್ಞಾನ ವಿಭಾಗ (ಗಣಿತ ಮತ್ತು ಭೌತಶಾಸ್ತ್ರ). ಯುಪಿಎಸ್‌ಸಿ ನಡೆಸುವ ಎನ್‌ಡಿಎ ಪರೀಕ್ಷೆಯ ಮೂಲಕ ಪಿಯುಸಿ ನಂತರ ನೇರವಾಗಿ ಭಾರತೀಯ ವಾಯುಪಡೆಗೆ ಆಫೀಸರ್ ಹಂತದಲ್ಲಿ ಸೇರ್ಪಡೆಯಾಗಬಹುದು. ಆಫ್‌ಕ್ಯಾಟ್ – Air Force Common Admission Test) ಯಾವುದೇ ಪದವಿ ಅಥವಾ ಬಿ.ಇ/ಬಿ.ಟೆಕ್. ಪದವಿ ಮುಗಿಸಿದ ಯುವಕ, ಯುವತಿಯರು ಎಎಫ್‌ಸಿಎಟಿ ಪರೀಕ್ಷೆ ಬರೆಯುವ ಮೂಲಕ ವಾಯುಪಡೆಯ ಮೂರು ಪ್ರಮುಖ ವಿಭಾಗಗಳಿಗೆ ಆಫೀಸರ್ ಆಗಿ ಆಯ್ಕೆಯಾಗಬಹುದು.
ಫ್ಲೈಯಿಂಗ್ ಬ್ರಾಂಚ್ – ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ ಪೈಲಟ್ ಆಗುವ ಅವಕಾಶ.
ಟೆಕ್ನಿಕಲ್ ಬ್ರಾಂಚ್ – ವಿಮಾನಗಳ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ನಿರ್ವಹಣೆ.
ನಾನ್-ಟೆಕ್ನಿಕಲ್ ಬ್ರಾಂಚ್ – ಅಡ್ಮಿನ್, ಲಾಜಿಸ್ಟಿಕ್ಸ್, ವೆದರ್ ಮತ್ತು ಅಕೌಂಟ್ಸ್ ವಿಭಾಗಗಳು.
ಸಿಡಿಎಸ್ (Combined Defence Services) ಅರ್ಹತೆ – ಇಂಜಿನಿಯರಿಂಗ್ ಪದವಿ ಅಥವಾ ವಿಜ್ಞಾನ ಪದವಿ (ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ ಓದಿರಬೇಕು).
ಯುಪಿಎಸ್‌ಸಿ ನಡೆಸುವ ಸಿಡಿಎಸ್ಇ ಪರೀಕ್ಷೆಯ ಮೂಲಕ ಪದವೀಧರರು ಫ್ಲೈಯಿಂಗ್ ಬ್ರಾಂಚ್‌ಗೆ ಪೈಲಟ್ ಆಗಿ ಪ್ರವೇಶ ಪಡೆಯಬಹುದು.

ಸಾಮಾನ್ಯ ಕೆಲಸಗಳಿಗಿಂತ ಭಿನ್ನವಾದ, ಸವಾಲಿನ ಮತ್ತು ಗೌರವಯುತ ಜೀವನಶೈಲಿ. ಆಕರ್ಷಕ ವೇತನ ಮತ್ತು ಭತ್ಯೆಗಳು. ಅತ್ಯುತ್ತಮ ಸಂಬಳದ ಜೊತೆಗೆ ಉಚಿತ ವೈದ್ಯಕೀಯ ಸೌಲಭ್ಯ. ವಸತಿ ಮತ್ತು ಕ್ಯಾಂಟೀನ್ ಸೌಲಭ್ಯ.
ವಿಶ್ವದರ್ಜೆಯ ತರಬೇತಿ, ನಾಯಕತ್ವ ಗುಣ ಮತ್ತು ಕ್ರೀಡಾ ಪ್ರೋತ್ಸಾಹ.

“ಆಕಾಶವನ್ನು ಸ್ಪರ್ಶಿಸುವ ಹಮ್ಮು” ಎಂಬ ಧ್ವೇಯವಾಕ್ಯ ಹೊಂದಿರುವ ಭಾರತೀಯ ವಾಯುಪಡೆಯು ಕೇವಲ ಒಂದು ಉದ್ಯೋಗವಲ್ಲ, ಅದೊಂದು ಜೀವನ ಮಾರ್ಗ. ದೇಶದ ಯುವಜನತೆ ಕೇವಲ ಕನಸು ಕಾಣದೆ, ಕಠಿಣ ಪರಿಶ್ರಮ, ದೈಹಿಕ ದೃಢತೆ ಹಾಗೂ ಸೂಕ್ತ ತರಬೇತಿಯ ಮೂಲಕ ವಾಯುಪಡೆಗೆ ಸೇರಿ ಭಾರತದ ಕೀರ್ತಿ ಪತಾಕೆಯನ್ನು ಬಾನತ್ತರಕ್ಕೆ ಹಾರಿಸಲು ಇದು ಸೂಕ್ತ ವೇದಿಕೆ.

ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿ ಭಾರತೀಯ ವಾಯುಪಡೆ ಸೇರಬಯಸುವ ಯುವಕ-ಯುವತಿಯರಿಗೆ ಅತ್ಯುತ್ತಮ ಮಟ್ಟದ ತರಬೇತಿಯನ್ನು ನೀಡುತ್ತಿದ್ದು, ಈಗಾಗಲೇ 50 ಕ್ಕೂ ಹೆಚ್ಚು ಯುವಕ ಯುವತಿಯರು ಇಲ್ಲಿ ತರಬೇತಿ ಪಡೆದು ಭಾರತೀಯ ವಾಯು ಪಡೆಗೆ ಆಯ್ಕೆಯಾಗಿದ್ದಾರೆ.
ಆಸಕ್ತ ಯುವಕ-ಯುವತಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ವಿದ್ಯಾಮಾತಾ ಸಂಸ್ಥೆಯನ್ನು ಈ 9620468869 ಸಂಖ್ಯೆಯಲ್ಲಿ ಸಂಪರ್ಕಿಸಿ.

LEAVE A REPLY

Please enter your comment!
Please enter your name here