







ಕಾಣಿಯೂರು: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಬೆಳೆವಿಮೆ ನಷ್ಟ ಪರಿಹಾರ ಮೊತ್ತ ರೈತರ ಖಾತೆಗಳಿಗೆ ಜಮಯಾಗುತ್ತಿದ್ದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹಳ ಕಡಿಮೆ ಮೊತ್ತ ಜಮಯಾಗುತ್ತಿದೆ . ಒಂದೇ ತಾಲೂಕು ಒಂದೇ ಪಂಚಾಯತ್ ವ್ಯಾಪ್ತಿಯ ಗ್ರಾಮದಿಂದ ಗ್ರಾಮಕ್ಕೆ ಬಾರಿ ತಾರತಮ್ಯ ಕಂಡು ಬಂದಿರುವುದು ಅವೈಜ್ಞಾನಿಕ ಹಾಗೂ ನ್ಯಾಯ ಸಮ್ಮತವಲ್ಲ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಹಾಗೂ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಪರಿಹಾರ ಮೊತ್ತವನ್ನು ಲೆಕ್ಕ ಮಾಡಿ ಜಮಾ ಮಾಡಲಾಗಿದೆ ಎಂದು ಇಲಾಖೆಗಳು ಹೇಳುತ್ತಿವೆ. ಆದರೆ ಅವೈಜ್ಞಾನಿಕವಾಗಿ ಲೆಕ್ಕ ಹಾಕಿ ರೈತರಿಗೆ ಮೋಸ ಹಾಗೂ ಅನ್ಯಾಯವಾಗಿದೆ ಎನ್ನುವುದು ಕೃಷಿಕ ಸಮಾಜದ ಅಭಿಪ್ರಾಯವಾಗಿದೆ. ಅಸಮರ್ಪಕ ಮಳೆಮಾಪನ, ದತ್ತಾಂಶ ಮಾಹಿತಿ ಸಂಗ್ರದಲ್ಲಿ ತೊಡಕು ಈ ಎಲ್ಲ ಬೆಳವಣಿಗೆಗಳು ವಿಮಾ ಕಂಪನಿಯೊಂದಿಗೆ ಒಳ ಒಪ್ಪಂದದ ಸಂಶಯಕ್ಕೆ ಕಾರಣವಾಗಿದೆ .
ರೈತರಿಗೆ ಆಗಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ಸರಕಾರದ ಮಟ್ಟದಲ್ಲಿ ವಿಮಾ ಕಂಪನಿಗಳನ್ನು, ಅಧಿಕಾರಿಗಳನ್ನು ಹಾಗೂ ಇಲಾಖೆ ಅಧಿಕಾರಿಗಳನ್ನು ಜೊತೆ ಸೇರಿಸಿ ಸಭೆ ಮಾಡಿ ಕಡಿಮೆ ಮೊತ್ತ ಜಮಾ ಆಗಿರುವ ರೈತರಿಗೆ ತಕ್ಷಣ ನ್ಯಾಯಯುತ ಪರಿಹಾರ ನೀಡಿ ನೀಡಬೇಕೆಂದು ಈ ಮೂಲಕ ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಕಾರ್ಯದರ್ಶಿ ಸುದರ್ಶನ್ ಶಿರಾಡಿ, ಉಪಾಧ್ಯಕ್ಷ ಸುಕುಮಾರ್ ಜಿಲ್ಲಾ ಪ್ರತಿನಿಧಿ ಮಹೇಶ್ ಸವಣೂರು ಅವರು
ಆಗ್ರಹಿಸಿದ್ದಾರೆ.












