







ದಸರಾ ವಿಭಾಗೀಯ ಸ್ಪರ್ಧೆಯಲ್ಲಿ ಆರು ಪದಕಗಳ ಭೇಟೆ





ಪುತ್ತೂರು: ಹಾಸನದಲ್ಲಿ ನಡೆದ ದಸರಾ ವಿಭಾಗೀಯ ಈಜು ಸ್ಪರ್ಧೆಯಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಗಾರರು ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟು ಆರು ಪದಕಗಳನ್ನು ಜಯಿಸಿದ್ದಾರೆ.
ಲಿಖಿತ್ ಅವರು 400 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
50 ಮೀಟರ್ ಬ್ಯಾಕ್‌ಸ್ಟ್ರೋಕ್, 100 ಮೀಟರ್ ಬ್ಯಾಕ್‌ಸ್ಟ್ರೋಕ್ ಹಾಗೂ 50 ಮೀಟರ್ ಫ್ರೀಸ್ಟೈಲ್ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿರುವ ಲಸ್ಯಾ, 50 ಮೀಟರ್ ಬಟರ್‌ಫ್ಲೈ ವಿಭಾಗದಲ್ಲೂ ಪದಕ ಗೆದ್ದು ಮಿಂಚಿದ್ದಾರೆ.
ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಸದಸ್ಯರಾಗಿರುವ ಈ ಪ್ರತಿಭಾವಂತ ಈಜುಗಾರರು ಡಾ. ಶಿವರಾಮ ಕಾರಂತ ಬಾಲವನ ಈಜುಕೊಳ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಈಜುಕೊಳದಲ್ಲಿ ನಿಯಮಿತ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ಪಾರ್ಥ ವರನಾಶಿ, ತ್ರಿಶೂಲ್ ಗೌಡ, ಕ್ರಾಂತಿ ತೇಜ, ವಿಕಾಸ್, ಶಿಶಿಲ್, ನಿಶ್ಮಾ ಹಾಗೂ ರಾಕೇಶ್ ಅವರು ತರಬೇತಿ ನೀಡುತ್ತಿದ್ದಾರೆ.










