







ಪುತ್ತೂರು:ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳ ಬಗ್ಗೆ ಸ್ವೀಕೃತವಾದ ದೂರು ಅರ್ಜಿಗೆ ಸಂಬಂಧಿಸಿ ಅ.16ರಂದು ಪೂರ್ವಾಹ್ನ 11 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಖುದ್ದು ಭೇಟಿ ನೀಡಿ ದೂರು ಅರ್ಜಿಗಳ ಕುರಿತು ಪರಿಶೀಲನೆ ನಡೆಯಲಿದೆ.ಸದ್ರಿ ದಿನದಂದು ದೇವಳದ ಕಾರ್ಯನಿರ್ವಹಣಾಧಿಕಾರಿ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ದೂರುದಾರರು ಹಾಜರಿದ್ದು ದೂರಿಗೆ ಸಂಬಂಧಿಸಿದ ಲಿಖಿತ ಹೇಳಿಕೆ ಹಾಗೂ ದಾಖಲೆ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ತಿಳಿಸಿದ್ದಾರೆ.


ದೇವಸ್ಥಾನದ ಕಾಮಗಾರಿಗಳ ಕುರಿತು ಸ್ವೀಕೃತವಾದ ದೂರನ್ನು ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾಽಕಾರಿಯವರು ತಿಳಿಸಿರುವುದರಿಂದ ಸೆ.25ರಂದು ಪೂರ್ವಾಹ್ನ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ದೇವಳದ ಕಾರ್ಯನಿರ್ವಹಣಾಧಿಕಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ದೂರುದಾರರಿಗೆ ತಿಳಿಸಲಾಗಿತ್ತು.ಆದರೆ ಕಾರಣಾಂತರದಿಂದ ಸದ್ರಿ ದಿನದಂದು ವಿಚಾರಣೆ ನಡೆಸಲಾಗಿರಲಿಲ್ಲ.ಇದೀಗ, ಅ.16ರಂದು ವಿಚಾರಣೆಗೆ ದಿನ ನಿಗದಿಯಾಗಿದೆ.













