ನಾಳೆ(ಅ.10): ಪುತ್ತೂರಿನಲ್ಲಿ ವಿದ್ಯುತ್ ವ್ಯತ್ಯಯ

0

ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ನಗರ, ಕಬಕ ಮತ್ತು ಬಲ್ನಾಡು ಫೀಡರ್‌ಗಳಲ್ಲಿ ದಿನಾಂಕ 10.10.2026 (ಶನಿವಾರ) ರಂದು ಪೂರ್ವಾಹ್ನ 10:00 ರಿಂದ ಅಪರಾಹ್ನ 4:00 ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ನಗರ ಉಪವಿಭಾಗ ಪುತ್ತೂರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ನಗರ, ಬನ್ನೂರು, ರಕ್ತೇಶ್ವರಿ ವಠಾರ, ಪೆರಿಯತ್ತೋಡಿ, ಕೊಡಿಪ್ಪಾಡಿ, ಪಡ್ನೂರು, ಕಬಕ, ಬಲ್ನಾಡು ಪರಿಸರದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here