ಬಾರ್ಯ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಬಿಡುಗಡೆ

0

ಪುತ್ತೂರು: ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಶ್ರೀ ಭದ್ರಕಾಳಿ ಅಮ್ಮನವರ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಳದ ಆಡಳಿತ ಮಂಡಳಿ ಸೇವಾ ಟ್ರಸ್ಟ್ ಪದಾಧಿಕಾರಿಗಳು  ವಿಶೇಷ ಪೂಜೆ ಸಲ್ಲಿಸುವ ಮೂಲಕ  ಬಿಡುಗಡೆಗೊಳಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕ ಗುರುಪ್ರಸಾದ ನೂರಿತ್ತಾಯ, ಕಾರ್ಯದರ್ಶಿ ಪ್ರಶಾಂತ ಪೈ,ಟ್ರಸ್ಟಿ ಮನೋಹರ ಶೆಟ್ಟಿ, ಪ್ರವೀಣ ಕುಮಾರ್, ಶ್ರೀಮತಿ ನವೀನ, ರಾಮಣ್ಣ ಗೌಡ, ವಿಶ್ವನಾಥ ಗೌಡ ಹಾಗೂ  ದಯಾನಂದ. ಪಿ, ದಯಾನಂದ ಬಾರ್ಯ ಮೊದಲಾದ ಭಕ್ತರು ಭಾಗವಹಿಸಿದ್ದರು. 

ಅಕ್ಟೋಬರ್ 11ರಿಂದ 20ರವರೆಗೆ ಜರಗಲಿರುವ ನವರಾತ್ರಿ ಉತ್ಸವವು ಭಕ್ತಾದಿಗಳ ಭಾಗವಹಿಸುವಿಕೆಯಿಂದ ಯಶಸ್ವಿಯಾಗಲಿ ಮತ್ತು ಜಗನ್ಮಾತೆಯ ಅನುಗ್ರಹ ಎಲ್ಲರಿಗೂ ಪ್ರಾಪ್ತಿಯಾಗಲಿಯೆಂದು ಪ್ರಾರ್ಥಿಸಲಾಯಿತು.

LEAVE A REPLY

Please enter your comment!
Please enter your name here