ಬಲ್ನಾಡು ನಿವಾಸಿ ನಾಪತ್ತೆ-ದೂರು

0

ಪುತ್ತೂರು: ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ನಿವಾಸಿ ಶ್ರೀನಿವಾಸ ನಾಯ್ಕ(49 ವ.)ಎಂಬವರು ಕಾಣೆಯಾಗಿರುವ ಬಗ್ಗೆ ಅವರ ಪತ್ನಿ ಲೀಲಾವತಿ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಶ್ರೀನಿವಾಸ ನಾಯ್ ಅವರು 5 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಔಷಧಿ ಸೇವನೆ ಮಾಡುತ್ತಿದ್ದರು. ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದವರು ಅ.10 ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಅಂಗಡಿಗೆಂದು ಅವರ ಬೈಕ್ (ಕೆಎ 21, ಆರ್ 5351)ನಲ್ಲಿ ಹೋದವರು ಮನೆಗೆ ವಾಪಸ್ಸು ಬಾರದೇ ಇದ್ದ ಹಿನ್ನೆಲೆಯಲ್ಲಿ ನೆರೆ ಕರೆಯವರಲ್ಲಿ, ಪರಿಚಯಸ್ಥರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದ್ದರೂ ಈ ತನಕ ಪತ್ತೆಯಾಗದೇ ಕಾಣೆಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here