ನೆಟ್ಟಣಿಗೆ ಮೂಡ್ನೂರು ಶಾಲೆಯಲ್ಲಿ 75ನೇ ವರ್ಷದ ಶಾರದಾ ಪೂಜೆ

0

ಪುತ್ತೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮೂಡ್ನೂರು ಕರ್ನೂರು ಇಲ್ಲಿ ನವರಾತ್ರಿಯ ಮೊದಲ ದಿನದಂದು ಪ್ರತಿವರ್ಷದಂತೆ ಶಾರದಾ ಪೂಜೆ ಹಾಗೂ ಪುಸ್ತಕ ಪೂಜೆಯನ್ನು ಅ.11ರಂದು ಆಚರಿಸಲಾಯಿತು. ಸುಮಾರು 75 ವರ್ಷಗಳ ಹಿಂದೆ ನಿವೃತ್ತ ಮುಖ್ಯಗುರು ಪದ್ಮನಾಭ ರೈ ಬೆದ್ರಾಡಿ ಅವರಿಂದ ಆರಂಭಗೊಂಡ ಶಾರದಾ ಆಚರಣೆ ಇದಾಗಿದೆ.

ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ, ಪೋಷಕರು, ವಿದ್ಯಾಭಿಮಾನಿಗಳು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾರದಾ ಪೂಜೆಯ ಪ್ರಯುಕ್ತ ಅಕ್ಷರಾಭ್ಯಾಸ, ಪ್ರಸಾದ ವಿತರಣೆ ಮತ್ತು ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here