







ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪದ ಕಾಂಚನ ಕ್ರಾಸ್ ಬಳಿ ಹೆದ್ದಾರಿ ಬದಿಯ ತೋಡಿನ ನೀರಿನಲ್ಲಿ ನೂರಾರು ಮೀನುಗಳು ಸತ್ತುಬಿದ್ದಿರುವುದು ಬೆಳಕಿಗೆ ಬಂದಿದೆ.


ತೋಡಿನಲ್ಲಿ ಹರಿಯುವ ನೀರಿನಲ್ಲಿ ನೂರಾರು ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಈ ಕುರಿತು ಸ್ಥಳೀಯರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಮೀನುಗಳಿಗೆ ಯಾರಾದರೂ ರಾಸಾಯನಿಕ ಬಳಸಿ ಕೊಂದಿದ್ದಾರೋ ಅಥವಾ ನೀರಿನಲ್ಲೇ ವಿಷದ ಅಂಶ ಹರಿದು ಬಂದು ಮೀನುಗಳು ಸತ್ತಿವೆಯೇ ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.













