ಕೃಪಾ ಕೆ.ಬಿ. ಅವರಿಗೆ ಡಾಕ್ಟರೇಟ್ ಪದವಿ

0

ಕಡಬ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ಸೈನ್ಸ್ ವಿಭಾಗದಲ್ಲಿ“Compensation of Dispersion in Optical Fibers with Fiber Bragg Grating Using Simulation Tools” ಎಂಬ ವಿಷಯದ ಕುರಿತು ಮಂಡಿಸಿರುವ ಸಂಶೋಧನಾ ಮಹಾಪ್ರಬಂಧಕ್ಕೆ ಕೃಪಾ ಕೆ.ಬಿ.ಯವರು ಡಾಕ್ಟರೇಟ್ ಪದವಿ ಪಡೆದಿದ್ದು, ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯ ದ ಘಟಿಕೋತ್ಸವ ಸಮಾರಂಭದಲ್ಲಿ ಇವರಿಗೆ ಪದವಿ ಪ್ರದಾನ ಮಾಡಲಾಗಿದೆ. ಇವರಿಗೆ ಡಾ. ಕಾರ್ತಿಕ್ ಅವರು ಮಾರ್ಗದರ್ಶನ ಮಾಡಿದ್ದರು.

ಕೃಪಾ ಕೆ.ಬಿ.ಇವರು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕಲ್ಕಳ ಕೆ.ಬಿ.ಚಂದ್ರಪ್ರಭಾ ಹಾಗೂ ಸಹಕಾರ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಕೆ.ವಿ.ಬಾಲಕೃಷ್ಣ ಗೌಡ ಇವರ ಪುತ್ರಿ. ಇವರು ಪ್ರಸ್ತುತ ಬೆಂಗಳೂರಿನ ಈಸ್ಟ್ ಪಾಯಿಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಪತಿ ಕೆ.ಜೀವನ್ ಪ್ರಕಾಶ್ ಇವರು ಬೆಂಗಳೂರಿನಲ್ಲಿ ಸಾಪ್ಟ್ ವೇರ್ ಉದ್ಯೋಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here