







ಪುತ್ತೂರು : ಮೈಸೂರು ನಗರದ ಹೆಸರಾಂತ ಲೇಖಕ ಜಯಪ್ರಕಾಶ್ ರಾವ್ ಅವರಿಗೆ ಅನುವಾದ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ವಿಶ್ವ ಸಾಹಿತ್ಯ ಪುರಸ್ಕಾರ 2026 ಲಭಿಸಿದೆ.


ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ಆಶ್ರಯದಲ್ಲಿ ಶ್ರೇಷ್ಠ ಸಾಹಿತಿ ಮೇಟಿಮುದಿಯ ಅಪ್ಪ ಸ್ಮರಣಾರ್ಥ ನೀಡುವ ಈ ಪ್ರಶಸ್ತಿಯನ್ನು ನವೆಂಬರ್ 8 ರಂದು ಉಡುಪಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.



ಶ್ರೀ ರಾವ್ ಅವರು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ ‘ವಿಂಗ್ಸ್ ಆಫ್ ಫೈರ್’ ಕೃತಿಯನ್ನು ‘ಅಗ್ನಿಯ ರೆಕ್ಕೆಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ದಾಖಲೆಯ 19 ಬಾರಿ ಮರುಮುದ್ರಣಗೊಂಡಿರುವ ಈ ಪುಸ್ತಕ ಹಲವು ಕಾಲೇಜುಗಳಲ್ಲಿ ಪಠ್ಯಪುಸ್ತಕವಾಗಿದ್ದು, ಜೂನ್ ತಿಂಗಳಲ್ಲಿ ರಾಜ್ಯಪಾಲರಿಂದ ಬಿಡುಗಡೆಗೊಂಡಿದೆ.
ಶ್ರೀ ರಾವ್ ಅವರು ಇದುವರೆಗೆ ಒಟ್ಟು 8 ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ. DRDO ಸಂಸ್ಥೆಯ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಡಾ. ಕಲಾಂ ಅವರ ಶಿಷ್ಟಾಚಾರ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ದೇಶದ ಹೆಸರಾಂತ ವ್ಯಕ್ತಿತ್ವ ವಿಕಸನ ತರಬೇತುದಾರ ಹಾಗೂ ಪ್ರೇರಣಾ ಉಪನ್ಯಾಸಕರಾಗಿ ಹಲವಾರು ವಿದ್ಯಾಸಂಸ್ಥೆಗಳಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಶೇಷವೆಂದರೆ ಶ್ರೀ ರಾವ್ ಅವರು ಪುತ್ತೂರಿನ St. Philomena ಸಂಸ್ಥೆಯ ಹಳೇ ವಿದ್ಯಾರ್ಥಿಯಾಗಿದ್ದು, Jaycees ಸಂಸ್ಥೆಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ತರಬೇತುದಾರರಾಗಿ ಈಗಲೂ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದಾರೆ. ಮೈಸೂರು ಪೊಲೀಸ್ ಅಧಿಕಾರಿಗಳ ಅಕಾಡೆಮಿಯ ಗೌರವ ಉಪನ್ಯಾಸಕರೂ ಹೌದು.
ಅವರ ‘ಅಗ್ನಿಯ ರೆಕ್ಕೆಗಳು’ ಪುಸ್ತಕವನ್ನು ಪ್ರಥಮ ಬಾರಿಗೆ ಪುತ್ತೂರಿನ ಕರ್ನಾಟಕ ಪ್ರಕಾಶನ ಪ್ರಕಟಿಸಿದ್ದು, ರಾಜೇಶ್ ಪ್ರೆಸ್ನ ರಘುನಾಥ್ ರಾವ್ ಅವರಿಂದ ಮುದ್ರಣಗೊಂಡಿದೆ. ಬೊಳಂತಕೋಡಿ ಈಶ್ವರ ಭಟ್ ಅವರ ಹಿರಿತನದಲ್ಲಿ ಈ ಪ್ರಕಾಶನ ಕಾರ್ಯ ನಡೆದಿರುವುದು ವಿಶೇಷ.










