







ಕಾಣಿಯೂರಿನಲ್ಲಿ ಬೀದಿ ನಾಟಕದ ಮೂಲಕ ಜನಜಾಗೃತಿ ಅಭಿಯಾನ


ಕಾಣಿಯೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಸುದೀರ್ಘ 25 ವರ್ಷಗಳ ಯಶಸ್ವಿ ಸಾರ್ವಜನಿಕ ಆಡಳಿತವನ್ನು ಪೂರೈಸಿದ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಒಂದು ತಿಂಗಳ ಸೇವಾ ಚಟುವಟಿಕೆಯ ಅಂಗವಾಗಿ, 2047 ವಿಕಸಿತ ಭಾರತ ಸಂಕಲ್ಪದಡಿ ಸೇವ ಪಾಕ್ಷಿಕದ ಪ್ರಯುಕ್ತ ದೇಶದ ಪ್ರಗತಿಗಾಗಿ ಮೋದಿ ಸಾಧನೆಯನ್ನು ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸುವ ಅಭಿಯಾನವು ಕಾಣಿಯೂರಿನಲ್ಲಿ ಅ 13ರಂದು ನಡೆಯಿತು.
ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಮಂಡಲ ಸಮಿತಿ ಕಾರ್ಯದರ್ಶಿಗಳಾದ ಗಣೇಶ್ ಉದನಡ್ಕ, ಶಿವಪ್ರಸಾದ್ ನಡುತೋಟ, ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ದೆಂತಾರು, ಜಿಲ್ಲಾ ರೈತ ಮೋರ್ಚಾದ ಸದಸ್ಯ ಧರ್ಮೇಂದ್ರ ಗೌಡ ಕಟ್ಟತ್ತಾರು, ಸುಳ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ, ಮಂಡಲ ಸಮಿತಿ ಸದಸ್ಯ ಧನಂಜಯ ಕೇನಾಜೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ಹಾಗೂ ನಿರ್ದೇಶಕರು, ಗ್ರಾ.ಪಂ ಮಾಜಿ ಸದಸ್ಯರು ಸಹಿತ ಪಕ್ಷದ ಪ್ರಮುಖರು,ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಶಕ್ತಿ ಕೇಂದ್ರಗಳ ಪ್ರಮುಖರು, ಬೂತ್ ಸಮಿತಿ ಪದಾಧಿಕಾರಿಗಳು ಹಾಗೂ ಪಕ್ಷದ ಹಿತೈಷಿಗಳು ಉಪಸ್ಥಿತರಿದ್ದರು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಗಣೇಶ್ ಉದನಡ್ಕ ಸ್ವಾಗತಿಸಿ, ವಂದಿಸಿದರು.



ವಿವಿಧ ಕಡೆಗಳಲ್ಲಿ ಬೀದಿ ನಾಟಕ ಪ್ರದರ್ಶನ:
ಮೋದಿ 25 ವರ್ಷಗಳ ಸಾರ್ವಜನಿಕ ಆಡಳಿತ ಸಂಭ್ರಮದ ಪ್ರಯುಕ್ತ ಬೀದಿ ನಾಟಕ ಮೂಲಕ ಜನಜಾಗೃತಿ ಅಭಿಯಾನವು ಅ 13ರಂದು ಸವಣೂರು, ಬೆಳಂದೂರು, ಕಾಣಿಯೂರು, ಎಡಮಂಗಲ, ಹೊಸ್ಮಠ ಹಾಗೂ ಕುಂತೂರು ಮುಂತಾದ ಭಾಗಗಳಲ್ಲಿ ಪ್ರದರ್ಶನಗೊಂಡಿತು. ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ ಕುಸುಮಾಧರ ಅವರ ನೇತೃತ್ವದಲ್ಲಿ ಸುಳ್ಯ ನಗರ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾರಾಯಣ, ಸುಳ್ಯ ಸಿ.ಎ ಬ್ಯಾಂಕ್ ನಿರ್ದೇಶಕ ಕೇಶವ, ರಂಗಭೂಮಿ ಕಲಾವಿದರಾದ ರಾಜು, ಪುಷ್ಪರಾಜ್ ಏನೆಕಲ್ಲು, ದುಷ್ಯಂತ್ ಕಂಜಿಪಿಲಿ, ಚಿನ್ಮಯಿ ಮರ್ಕಂಜ. ಚಿದಾನಂದ ಅವರ ತಂಡ ಬೀದಿ ನಾಟಕ ಪ್ರದರ್ಶನ ನೀಡಿತು.










