







ಪುತ್ತೂರು : ಪೆರ್ಲಂಪಾಡಿ ಅಂಚೆ ಇಲಾಖೆಯ ನೌಕರ ಹಾಗೂ ಸುದ್ದಿ ಬಿಡುಗಡೆ ಏಜೆಂಟ್ ವೀರಪ್ಪ ಗೌಡ ಪೆರ್ಲಂಪಾಡಿ ಅವರಿಗೆ ಬೆಳ್ಳಾರೆ ಜೆಸಿಐ ವತಿಯಿಂದ ಪೆರುವಾಜೆ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ನೀಡಿ ಪುರಸ್ಕರಿಸಲಾಯಿತು.


ಈ ಸಂದರ್ಭದಲ್ಲಿ ಜೆಸಿಐ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ವಲಯ ಉಪಾಧ್ಯಕ್ಷ ಕರುಣಾಕರ ಗೋಗಟೆ, ಬೆಳ್ಳಾರೆ ಜೆಸಿಐ ಅಧ್ಯಕ್ಷೆ ಪೂರ್ಣಿಮಾ ಪೆರ್ಲಂಪಾಡಿ,ಪೂರ್ವಾಧ್ಯಕ್ಷರಾದ ಜಗದೀಶ್ ರೈ ಪೆರುವಾಜೆ,ಪ್ರದೀಪ್ ಕುಮಾರ್ ರೈ ,ಪ್ರೀತಮ್ ರೈ ಉಪಸ್ಥಿತರಿದ್ದರು.













