







ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆಯ ಪರವಾಗಿ ಹೈಕೋರ್ಟ್ನಲ್ಲಿ ದೇವಾಲಯದ ಜಮೀನಿನ ಉಳಿವಿಗಾಗಿ ಹೋರಾಟ ನಡೆಸಿದ ನ್ಯಾಯವಾದಿ ಅಜಯ್ ಪ್ರಭು ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಅನುಗ್ರಹ ಪ್ರಸಾದ ಪಡೆದರು.


ದೇವಾಲಯದ ಪ್ರಮುಖ ಅರ್ಚಕ ವಿ.ಎಸ್. ಆಚಾರ್ಯ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಸಂರಕ್ಷಣಾ ವೇದಿಕೆಯ ಸದಸ್ಯರಾದ ಬಾಲಚಂದ್ರ ಸೊರಕೆ, ಗೋಪಾಲ ಎಂ.ಆರ್, ವಾಸುದೇವ, ಮೋಹನ್ ಟಿ ಮತ್ತಿತರರು ಉಪಸ್ಥಿತರಿದ್ದರು.













