







ನಿಡ್ಪಳ್ಳಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು, ಪಾಣಾಜೆ ಇದರ ವತಿಯಿಂದ 37 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ ವೇದಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ ಇವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.21 ರಂದು ಆರ್ಲಪದವು ರಣಮಂಗಲ ಸಭಾ ಭವನದಲ್ಲಿ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು:
ಪೂರ್ವಾಹ್ನ 8-15 ಶ್ರೀ ಶಾರದಾಮಾತೆಯ ವಿಗ್ರಹ ಪ್ರತಿಷ್ಠೆ.ಬೆಳಿಗ್ಗೆ ಗಂಟೆ 8-30 ರಿಂದ ಗಣಪತಿ ಹವನ.ಬೆಳಿಗ್ಗೆ ಗಂಟೆ 9-00ರಿಂದ ಭಜನಾ ಕಾರ್ಯಕ್ರಮ ಶ್ರೀ ಭಾರತಾಂಬಾ ಭಜನಾ ಸಂಕೀರ್ತನೆ ಆರ್ಲಪದವು, ಪಾಣಾಜೆ ಇವರಿಂದ.ಗಂಟೆ 10-30 ರಿಂದ ಆಯುಧಪೂಜೆ,10-45 ಅಕ್ಷರಾರಂಭ,ಗಂಟೆ 10-30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 1-00 ರಿಂದ
ಮಹಾಪೂಜೆ, ಪ್ರಸಾದ ವಿತರಣೆ, ಸರ್ವಜನಿಕ ಅನ್ನಸಂರ್ಪಣೆ ನಡೆಯಲಿದೆ.
ಸಂಜೆ ಗಂಟೆ 7 ರಿಂದ ಮಹಾಪೂಜೆ ನಂತರ ಶೋಭಾ ಯಾತ್ರೆ ನಡೆದು ಶ್ರೀ ದೇವಿಯ ಜಲಸ್ತಂಭನ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮಗಳು; ಸಂಜೆ ಗಂಟೆ 3.30 ರಿಂದ ಚೈತನ್ಯ ಕಲಾವಿದರು ಬೈಲೂರು ಅಭಿನಯಿಸುವ ಹಾಸ್ಯಮಯ ನಾಟಕ ” ರಾಘು ಮಾಷ್ಟ್ರು”. ವಿಶೇಷ ಆಕರ್ಷಣೆಯಾಗಿ ಶ್ರೀ ಶಾಸ್ತಾರ ಕಲಾ ಸಮಿತಿ ಮಣಿಯೂರು, ದೇಲಂಪಾಡಿ ಇವರಿಂದ ಸಿಂಗಾರಿ ಮೇಳ. ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ಕುಣಿತ ಭಜನಾ ತಂಡ ಇವರಿಂದ ಕುಣಿತಾ ಭಜನೆ,ಆಕರ್ಷಕ ಸುಡು ಮದ್ದು ಪ್ರದರ್ಶನ ನಡೆಯಲಿದೆ ಎಂದು ಶಾರದೋತ್ಸವ ಸಮಿತಿಯವರು ತಿಳಿಸಿದ್ದಾರೆ.












