







ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್ನಲ್ಲಿರುವ ಗೃಹೋಪಯೋಗಿ ವಸ್ತುಗಳ ಬೃಹತ್ ಶೋರೂಂ ಆದ ಅತಿಥಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ಸ್ ವತಿಯಿಂದ ಗ್ರಾಹಕರಿಗಾಗಿ ಆಕರ್ಷಕ ದಸರಾ ಬಿಗ್ ಆಫರ್ ನಡೆಯುತ್ತಿದೆ. ಈ ಹಬ್ಬದ ಸೀಸನ್ನಲ್ಲಿ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ಗಳಾದ ವಿವೋ ಮತ್ತು ಒಪ್ಪೋ ಸ್ಮಾರ್ಟ್ ಫೋನ್ಗಳ ಮೇಲೆ ಭರ್ಜರಿ ಕೊಡುಗೆಗಳು ಲಭ್ಯವಿವೆ. ಗ್ರಾಹಕರು ಖರೀದಿಸುವ ಪ್ರತಿಯೊಂದು ಉತ್ಪನ್ನದ ಮೇಲೂ ವಿಶೇಷ ಮತ್ತು ಆಕರ್ಷಕ ಉಡುಗೊರೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.
ನವರಾತ್ರಿ ಹಬ್ಬದ ಸಲುವಾಗಿ ಒಪ್ಪೋ ಸ್ಮಾರ್ಟ್ ಫೋನ್ ಖರೀದಿದಾರರಿಗೆ 10 ಲಕ್ಷ ರೂಪಾಯಿವರೆಗಿನ ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶವಿದೆ (ಇದರಲ್ಲಿ 1.4 ಕೋಟಿ ರೂ.ಗೂ ಅಧಿಕ ಮೌಲ್ಯದ ಐಒಟಿ ಬಹುಮಾನಗಳು, 90 ಲಕ್ಷ ರೂ. ಮೌಲ್ಯದ ನಗದು ಬಹುಮಾನಗಳು ಹಾಗೂ 25 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯಗಳು ಸೇರಿವೆ). ಜೊತೆಗೆ ಶೇ. 10 ರಷ್ಟು ಇನ್ಸ್ಟಂಟ್ ಕ್ಯಾಶ್ಬ್ಯಾಕ್, 18 ತಿಂಗಳವರೆಗೆ ಜೀರೋ ಡೌನ್ ಪೇಮೆಂಟ್ ಮತ್ತು ಶೇ. 10 ರಷ್ಟು ಎಕ್ಸ್ ಚೇಂಜ್ ಬೋನಸ್ ಸೌಲಭ್ಯವಿದೆ. ಒಪ್ಪೋ ಎ ಸೀರೀಸ್ ದಸರಾ ಸ್ಪೆಷಲ್ ಆಫರ್ ಇದ್ದು ಈ ಮಾಡೆಲ್ಗಳ ಮೇಲೆ 500 ರಿಂದ 1,000 ವರೆಗೆ, ಎ6 ಮಾಡೆಲ್ ಮೇಲೆ ಫ್ಲಾಟ್ ಶೇ. 10 ಹಾಗೂ ಎ6 ಪ್ರೋ ಮೇಲೆ ಶೇ. 10 ರವರೆಗೆ (ಗರಿಷ್ಠ ರೂ. 2,000) ಕ್ಯಾಶ್ಬ್ಯಾಕ್ ಲಭ್ಯವಿದೆ. ಈ ಆಫರ್ ಅಕ್ಟೋಬರ್ 21ರವರೆಗೆ ಮಾತ್ರ ಇರಲಿದೆ.
ಹೊಸದಾಗಿ ಮಾರುಕಟ್ಟೆಗೆ ಲಭ್ಯವಿರುವ ವಿವೋ ಎಸ್2 ಸ್ಮಾರ್ಟ್ ಫೋನ್ ಮಾರಾಟವು ಪ್ರಾರಂಭವಾಗಿದೆ. ಇದರೊಂದಿಗೆ 1 ವರ್ಷದ ವಿಸ್ತೃತ ವಾರಂಟಿ, ಶೇ. 10 ರಷ್ಟು ಕ್ಯಾಶ್ಬ್ಯಾಕ್ ಹಾಗೂ 15/0 ಹಣಕಾಸು ಸೌಲಭ್ಯವಿದೆ. ವಿವೋ ಮೊಬೈಲ್ಗಳ ಯುಪಿಐ ಕ್ಯಾಶ್ಬ್ಯಾಕ್ ಆಫರ್ ಅಡಿಯಲ್ಲಿ ಆಕರ್ಷಕ ನಗದು ರಿಯಾಯಿತಿ ಹಾಗೂ ಕ್ಯಾಶ್ಬ್ಯಾಕ್ ಸಿಗಲಿದೆ. ಅಲ್ಲದೆ,ರೂ. 101 ಪಾವತಿಸಿ 6 ತಿಂಗಳ ಡಿಸ್ಪ್ಲೇ ಡ್ಯಾಮೇಜ್ ಪ್ರೊಟೆಕ್ಷನ್ ಪಡೆಯುವ ಸೌಲಭ್ಯವೂ ಇದೆ.
ಕೇವಲ ಮೊಬೈಲ್ ಫೋನ್ಗಳಿಗೆ ಮಾತ್ರವಲ್ಲದೆ ಇನ್ನಿತರ ಎಲ್ಲಾ ಬಗೆಯ ಗೃಹೋಪಯೋಗಿ ವಸ್ತುಗಳ ಮೇಲೂ ದಸರಾ ಹಬ್ಬದ ಸಲುವಾಗಿ ಬಿಗ್ ಆಫರ್ ನಡೆಯುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಫರ್ನಿಚರ್ಗಳ ಮೇಲೂ ವಿಶೇಷ ರಿಯಾಯಿತಿ ಲಭ್ಯವಿದೆ. ದಿನದಿಂದ ದಿನಕ್ಕೆ ಮೊಬೈಲ್ ಬೆಲೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಇನ್ನಷ್ಟು ಬೆಲೆ ಏರುವ ಮುನ್ನ ಈಗಲೇ ಖರೀದಿಸಿ ದಸರಾ ಹಬ್ಬದ ಸುಂದರ ಕ್ಷಣಗಳನ್ನು ಸೆರೆ ಹಿಡಿಯಿರಿ. ಬನ್ನಿ ಖರೀದಿಸಿ ಉಚಿತ ಉಡುಗೊರೆಗಳೊಂದಿಗೆ ಆಕರ್ಷಕ ಕ್ಯಾಶ್ಬ್ಯಾಕ್ ತಮ್ಮದಾಗಿಸಿಕೊಳ್ಳಿರಿ.















