ಸವಣೂರು : ಉಲಾಯಿ ಪಿದಾಯಿ ಜೂಜಾಟ -ಐವರು ವಶಕ್ಕೆ

0

ಸವಣೂರು: ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರು ಕುವತ್ತೋಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಹಣವನ್ನು ಪಣವಾಗಿಟ್ಟು ಉಲಾಯಿ – ಪಿದಾಯಿ ಎಂಬ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಈರಯ್ಯ ಡಿ ಎನ್, ಪೊಲೀಸ್ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ.

ಜೂಜಾಟದಲ್ಲಿ ತೊಡಗಿಕೊಂಡಿದ್ದ ಗುರವ, ಇಸೂಬು, ಕುಶಾಲಪ್ಪ, ತಾಜುದ್ದೀನ್, ರಾಮಣ್ಣ ಎಂಬವರು ವಶಕ್ಕೆ ಪಡೆದುಕೊಂಡು, ಜೂಜಾಟಕ್ಕೆ ಬಳಸಿದ ರೂ 18,150/-ನಗದನ್ನು, ಇಸ್ಪೀಟು ಎಲೆಗಳು ಹಾಗೂ ಇತರೆ ಸೊತ್ತುಗಳನ್ನು ಸ್ವಾಧೀನಪಡಿಸಿದ್ದಾರೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 60/2026, ಕಲಂ: 87 ಕೆ ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here