ಕಲ್ಮಡ್ಕ: ವಿದ್ಯುತ್ ಶಾಕ್‌ನಿಂದ ದುರ್ಮರಣಕ್ಕೀಡಾದ ಯುವಕರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ದಲಿತ ಸಂಘಟನೆಗಳಿಂದ ಬೆಳ್ಳಾರೆ ಪೊಲೀಸ್ ಠಾಣಾ ಮುಂಭಾಗದಲ್ಲಿ ಪ್ರತಿಭಟನೆ

0

ಮೃತರ ಕುಟುಂಬಕ್ಕೆ ಸರಕಾರ, ಆರೋಪಿಗಳಿಂದ ಪರಿಹಾರ ಒದಗಿಸುವಂತೆ ಮನವಿ


ಕಾಣಿಯೂರು:
ಇತ್ತೀಚೆಗೆ ಕಲ್ಮಡ್ಕ ಗ್ರಾಮದ ಹೊಳಕ್ಕೆರೆ ಎಂಬಲ್ಲಿ ಮೀನು ಹಿಡಿಯಲು ಹೋಗಿ ವಿದ್ಯುತ್ ಶಾಕ್ ಗೆ ಒಳಗಾಗಿ ದಾರುಣವಾಗಿ ಮೃತಪಟ್ಟ ಇಬ್ಬರು ಯುವಕರ ಕುಟುಂಬಕ್ಕೆ ಮತ್ತು ಗಾಯಗೊಂಡ ಯುವಕನಿಗೆ, ವಿದ್ಯುತ್ ಸಂಪರ್ಕ ನೀಡಿದ ತೋಟದ ಮಾಲಕರಾದ ಮಧುಸೂದನ್ ಭಟ್‌ರವರು ಪರಿಹಾರ ನೀಡಬೇಕು ಮತ್ತು ಪ್ರಕರಣದ ಉಳಿದ ಆರೋಪಿಗಳನ್ನು ಬಂಽಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳು ಬೆಳ್ಳಾರೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಅ. 22ರಂದು ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ರಮೇಶ್ ಬೆಳ್ಚಪ್ಪಾಡರನ್ನು ಈಗಾಗಲೇ ಬಂಧಿಸಿದ್ದು, ಪ್ರಮುಖ ಆರೋಪಿ ಮಧುಸೂದನ್ ಭಟ್ ಅವರನ್ನು ಬಂಧಿಸಬೇಕು ಮತ್ತು ಮೃತರ ಕುಟುಂಬಕ್ಕೆ ಮಧುಸೂದನ ಭಟ್ ಅವರಿಂದ ಸೂಕ್ತ ಪರಿಹಾರ ತೆಗೆಸಿಕೊಡಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುವ ಕುರಿತು ನಿರ್ಧರಿಸಲಾಗಿತ್ತು. ಈ ಮಧ್ಯೆ ಮಧುಸೂದನ್ ಭಟ್ಟರು ಅ. 20ರಂದು ಬೆಳ್ಳಾರೆ ಪೊಲೀಸ್ ಠಾಣೆಗೆ ಶರಣಾಗತರಾದ ಕಾರಣ ಪ್ರತಿಭಟನೆ ಶಾಂತ ರೀತಿಯಲ್ಲಿ ನಡೆಯಿತು.

ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡ್, ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ದ.ಕ. ಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು, ದ.ಕ. ಜಿಲ್ಲಾ ನಲಿಕೆಯವರ ಸಂಘದ ಮಾಜಿ ಅಧ್ಯಕ್ಷರುಗಳಾದ ಪ್ರಭಾಕರ್ ಶಾಂತಿಗೋಡು, ಸೇಸಪ್ಪ ಕೆ, ದೈವಾರಾಧನಾ ಸಮಿತಿ ಪನೀರ ಯಾನೆ ನಲಿಕೆ ಸಮಾಜ ಸೇವಾ ಸಂಘ ಮೂಡಬಿದಿರೆ ಇದರ ಜಿಲ್ಲಾಧ್ಯಕ್ಷ ಜನಾದನ ಬುಡೋಳಿ, ಮತ್ತು ಸದಸ್ಯ ದಯಾನಂದ, ರಾಜ್ಯ ಮುಗೇರ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಜಿಲ್ಲಾ ಗೌರವ ಸಲಹೆಗಾರ ರಾಮಣ್ಣ ಪಿಲಿಂಜ, ಜಿಲ್ಲಾ ದಲಿತ ಮುಖಂಡ ವಿಶ್ವನಾಥ ಅಲೆಕ್ಕಾಡಿ, ನಲಿಕೆಯವರ ಸಂಘ ಬೆಳ್ತಂಗಡಿ ಕಾರ್ಯದರ್ಶಿ ಗಣೇಶ್, ದಲಿತ ಹಕ್ಕುಗಳ ಹೋರಾಟಗಾರರಾದ ಈಶ್ವರಿ ಪದ್ಮುಂಜ ಈ ಸಂದರ್ಭದಲ್ಲಿ ಮಾತನಾಡಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಬೇಡಿಕೆ ಇಟ್ಟರು.

ದಲಿತ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಸುಬ್ರಾಯ ಕಲ್ಮಂಜ, ದೈವ ನರ್ತಕ ನಾಗೇಶ್ ಬೆಳಾಲ್, ನಲಿಕೆ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಶ್ರೀಧರ್ ಪೆರ್ಲಂಪಾಡಿ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ತೆಂಕಿಲ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಮಾಜಿ ಸಂಘಟನಾ ಕಾರ್ಯದರ್ಶಿ ಧನಂಜಯ್ ಪುತ್ತೂರು, ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ವಿಟ್ಲ ದಲಿತ್ ಸೇವಾ ಸಮಿತಿ ಮಾಜಿ ಜಿಲ್ಲಾಧ್ಯಕ್ಷೆ ಯಾಮಿನಿ ಬೆಟ್ಟಂಪಾಡಿ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಕಡಬ ಸೇರಿದಂತೆ ನೂರಾರು ದಲಿತ ಸಮುದಾಯದ ನಾಯಕರು, ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕುಶಾಲಾಕ್ಷಿ ಕೆದಿಲ ಸ್ವಾಗತಿಸಿ, ಸೇಸಪ್ಪ ಬೆದ್ರಕಾಡು ವಂದಿಸಿದರು. ಈ ಸಂದರ್ಭದಲ್ಲಿ ಸೇರಿದ ಜನರಿಂದ ರೂ.14,100 ಸಂಗ್ರಹಿಸಿ ಎರಡೂ ಮನೆಯವರಿಗೆ ನೀಡಲಾಯಿತು.

LEAVE A REPLY

Please enter your comment!
Please enter your name here