







ಪುತ್ತೂರು:ಪುತ್ತೂರು ಪ್ರಧಾನ ರಸ್ತೆಯ ಜಿ.ಎಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 46ನೇ ವಾರ್ಷಿಕ ಮಹಾಸಭೆಯು ಅ.25 ರಂದು ಮನೀಷಾ ಸಭಾಂಗಣದಲ್ಲಿ ನಡೆಯಲಿದೆ.ಮುಖ್ಯ ಅತಿಥಿಯಾಗಿ ಪುತ್ತೂರು ವಾರ್ಡ್ 1 ರ ಆದಾಯ ತೆರಿಗೆ ಅಧಿಕಾರಿ ಸುದರ್ಶನ್ ರಾವ್ ಕೆ.ರವರು ಭಾಗವಹಿಸಲಿರುವರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಡಿ.ಕಲ್ಲಾಜೆರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸನ್ಮಾನ:
ಪುತ್ತೂರು ಜಿ.ಎಲ್ ಗ್ರೂಫ್ ಆಫ್ ಕಂಪನೀಸ್ ನ ಚೇರ್ಮನ್ ಬಲರಾಮ ಆಚಾರ್ಯ, ಹಿರಿಯ ಉದ್ಯಮಿ ಆಯ್ಕೆ ಗ್ಲಾಸ್ ನ ಕೆ.ರಜಾಕ್ ಖಾನ್, ಮುಳಿಯ ಗೋಲ್ಡ್ ಡೈಮಂಡ್ಸ್ ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವಪ್ರಸಾದ್ ಮುಳಿಯ, ಕೃಷಿ ಉಪಕರಣ ತಯಾರಕ ಫಿಲಿಪ್ ಡಿ’ಸೋಜ ಉರಿಮಜಲುರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ ಎಂದು ಪುತ್ತೂರು ವಾಣಿಜ್ಯ, ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಉಲ್ಲಾಸ್ ಪೈ, ಕೋಶಾಧಿಕಾರಿ ಜೋನ್ ಕುಟಿನ್ಹಾ, ಉಪಾಧ್ಯಕ್ಷರಾದ ರಮೇಶ್ ಪ್ರಭು, ಮನೋಜ್ ಟಿ.ವಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕರಿಗೆ ಸನ್ಮಾನ..
ಪುತ್ತೂರು/ಕುಂಬ್ರ/ಕೆಯ್ಯೂರು/ಉಪ್ಪಿನಂಗಡಿ ಹಾಗೂ ವಿಟ್ಲ ವರ್ತಕ ಸಂಘದ ವತಿಯಿಂದ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿನ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಶ್ರಮಿಸಿದ ಶಾಸಕ ಅಶೋಕ್ ಕುಮಾರ್ ರೈರವರಿಗೆ ಸನ್ಮಾನ ಕಾರ್ಯ ನಡೆಯಲಿದೆ.


ಕ್ರೀಡಾ ಸಮ್ಮಿಲನ..
ವರ್ಷಂಪ್ರತಿ ಸಂಘದ ವಾರ್ಷಿಕ ಮಹಾಸಭೆಯ ದಿನದಂದು ವರ್ತಕ ಸದಸ್ಯರಿಗೆ ಹಾಗೂ ವರ್ತಕರ ಕುಟುಂಬದವರಿಗೆ ವಿವಿಧ ಆಟೋಟ ಸ್ಪರ್ಧೆಗಳು ಅ.25 ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7.30ರಿಂದ ನಡೆಯಲಿದೆ. ಮುಖ್ಯ ಅತಿಥಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿರವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟದಲ್ಲಿ ನಡಿಗೆ ಸ್ಪರ್ಧೆ, ನಿಗದಿತ ಓವರ್ ಕ್ರಿಕೆಟ್, ಇನ್ನಿತರ ಆಟೋಟ ಸ್ಪರ್ಧೆ ನಡೆಯಲಿದೆ.













