






ವಿಟ್ಲ : ಕುಳ ಗ್ರಾಮದ ಅಳಕೆಮಜಲು ನಿವಾಸಿ ಬಾಬುರಾಯ ಆಚಾರ್ಯ (75 ವ.) ರವರು ಅ.28ರಂದು ಸಾಯಂಕಾಲ ಹೃದಯಾಘಾತದಿಂದ ನಿಧನರಾದರು.


ವಾಸ್ತುತಜ್ಞರಾಗಿದ್ದ ಬಾಬುರಾಯ ಆಚಾರ್ಯರವರು ಹಲವು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಅಳಕೆ ಮಜಲು ಕೂಡುವಳಿಕೆ ಮುಕ್ತೇಸರರಾಗಿದ್ದ ಇವರು, ಅಳಕೆಮಜಲು ಕುಟುಂಬದ ಹಿರಿಯರಾಗಿದ್ದರು. ಸ್ಥಳೀಯ ಹಲವು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿಯೂ ಸಕ್ರೀಯರಾಗಿದ್ದ ಇವರು, ಸ್ಥಳೀಯವಾಗಿ ತಮ್ಮ ಸರಳ, ಸ್ನೇಹಮಯಿ ವ್ಯಕ್ತಿತ್ವದಿಂದ ಜನಾನುರಾಗಿಗಳಾಗಿದ್ದರು. ಮೃತರು ಪುತ್ರ, ಸೊಸೆ, ಪುತ್ರಿ, ಅಳಿಯ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.













