






ಕಡಬ: ರಸ್ತೆ ದಾಟುತ್ತಿದ್ದ ವೃದ್ಧರೋರ್ವರು ಸ್ಕೂಟರ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಕಡಬ ಮುಖ್ಯರಸ್ತೆಯಲ್ಲಿ ಅ.26ರಂದು ಮಧ್ಯಾಹ್ನ ನಡೆದಿದೆ.
ಕಡಬ ತಾಲೂಕು ಎಡಮಂಗಲ ನಿವಾಸಿ ಪಿ.ಪೂವಪ್ಪ ಗೌಡ (71ವ.)ಗಾಯಗೊಂಡವರು. ಇವರು ಮನೆಯಿಂದ ಕಡಬ ಪೇಟೆಗೆ ಬಂದವರು ಕಡಬ ಮುಖ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್ ಸವಾರೆಯೊಬ್ಬರು ಸಹಸವಾರೆಯನ್ನು ಕುಳ್ಳರಿಸಿಕೊಂಡು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ.


ಘಟನೆಯಲ್ಲಿ ಗಾಯಗೊಂಡ ಪೂವಪ್ಪ ಗೌಡರನ್ನು ಸಾರ್ವಜನಿಕರು ಉಪಚರಿಸಿ ಆಟೋ ರಿಕ್ಷಾದಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಗಾಯಾಳು ಪೂವಪ್ಪ ಗೌಡ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.













