ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ

0

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯು ಶಾಲಾ ಸಭಾಭವನದಲ್ಲಿ ನಡೆಯಿತು. ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷ ವಂ| ಫಾ| ಜೇಮ್ಸ್ ಡಿ’ಸೋಜ ರವರು ಅತಿಥಿಗಳ ಜೊತೆಗೂಡಿ ನೆಹರೂರವರ ಭಾವಚಿತ್ರಕ್ಕೆ ಹೂಮಾಲೆಯನ್ನು ಹಾಕಿ ಗೌರವಿಸಿದರು.

ಶಿಕ್ಷಕಿ ಹೇಮಾಲತಾರವರು ಮಕ್ಕಳ ದಿನಾಚರಣೇಯ ಮಹತ್ವದ ಕುರಿತು ಮಾತನಾಡಿದರು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳ ಜೊತೆಗೆ ಹಗ್ಗ ಜಗ್ಗಾಟ ಸ್ಪಧೆಯನ್ನು ಏರ್ಪಡಿಸಲಾಗಿತ್ತು. ಈ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲರಾದ ವಂ| ಫಾ| ವಿಜಯ್ ಲೋಬೊ ರವರು ಮಕ್ಕಳ ದಿನಾಚರಣೆಯ ಶುಭಾಶಯವನ್ನು ನೀಡಿದರು.

ಸಂಚಾಲಕರಾದ ವಂ| ಫಾ| ಜೇಮ್ಸ್ ಡಿ’ಸೋಜಾರವರು ಅಧ್ಯಕ್ಷೀಯ ಭಾಷಣ ನೀಡಿದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಶ್ರೀ ಆಂಟನಿ ಫೆರ್ನಾಂಡೀಸ್, ರವಿ ಕುಮಾರ್ ಹಾಗೂ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.

ಶ್ರೀಮತಿ ನಿಶಾರವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಶಾನ್ ಧನ್ಯವಾದವಿತ್ತರು. ಮಕ್ಕಳಿಂದ ಹಾಗೂ ಶಿಕ್ಷಕ ಶಿಕ್ಷಕಿ ಹಾಗೂ ಬೋಧಕೇತರ ಸಿಬ್ಬಂದಿಗಳಿಂದ ವೈವಿದ್ಯಮಯ ಮನೋರಂಜನಾ ಕಾರ್ಯಕ್ರಮವು ಜರಗಿತು.

LEAVE A REPLY

Please enter your comment!
Please enter your name here