ಅಳದಂಗಡಿಯಲ್ಲಿ ನ.28ರಂದು ನಡೆಯಲಿರುವ ಶ್ರೀ ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ ಪೂರ್ಭಾವಿ ಸಭೆ: ಆಮಂತ್ರಣ ಪತ್ರಿಕೆ ಬಿಡುಗಡೆ

0

ಅಳದಂಗಡಿ:  ನ. 28  ರಂದು ಅಳದಂಗಡಿಯಲ್ಲಿ ನಡೆಯಲಿರುವ ಶ್ರೀ ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ  ಮುಂಡೂರು ಶ್ರೀ ಶಾರದಾಂಬ ಯುವಕ ಮಂಡಲದ ವಠಾರದಲ್ಲಿ    ನ.23 ರಂದು ಪೂರ್ವಭಾವಿ  ಸಭೆ ನಡೆಯಿತು.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ಎಂ ಅರವಿಂದ ಭಟ್ ರವರು ಯಕ್ಷಗಾನ ಬಯಲಾಟದ ಆಮಂತ್ರಣವನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಹಮ್ಮಾಯಿ ಸೇವಾ ಸಮಿತಿ ಕೋಟಿ ಕಟ್ಟೆ ಇದರ ಗೌರವ ಅಧ್ಯಕ್ಷರಾದ ಗುರುವಪ್ಪ ಸಾಲಿಯಾನ್, ಯಕ್ಷಗಾನ ಬಯಲಾಟ ಸೇವಾ ಸಮಿತಿ ಮುಂಡೂರು ಇದರ ಪ್ರಧಾನ ಸಂಚಾಲಕ ಚಾಮರಾಜ ಸೇಮಿತ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಆನಂದ ಸಾಲಿಯಾನ್, ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ ಮುಂಡೂರು ಇದರ ಅಧ್ಯಕ್ಷ ಯಾದವ ಕುಲಾಲ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೀವ್ ಸಾಲಿಯಾನ್, ಅತ್ರಲ್ಕ್ಯಾರ್- ಹುನಿಂಜೆ ಮಾರಿಪೂಜೆ ಸೇವಾ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಹೆಗ್ಡೆ ,ಜ್ಯೋತಿ ಯುವತಿ ಮಂಡಲದ ಅಧ್ಯಕ್ಷೆ ಸುಶೀಲಾ ಶೆಟ್ಟಿ, ನವಶಕ್ತಿ ಮುಂಡೂರು ಇದರ ಅಧ್ಯಕ್ಷೆ ಅರುಣಜಯರಾಜ್,ಕಾರ್ಯದರ್ಶಿ ಅನುಶ ಆಚಾರ್ಯ ,ಸಂದ್ಯಾ, ಬೆಸ್ಟ್ ಮುಂಡೂರು ಇದರ ಸಂಚಾಲಕ ಅಶೋಕ್ ಕುಮಾರ್,ರಮೇಶ್ ದೇವಾಡಿಗ, ,ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘ ಮುಂಡೂರು ಇದರ ಅಧ್ಯಕ್ಷ ಬೋಜ ಪೂಜಾರಿ ,ಶ್ರೀ ಶಾರದಾಂಬ ಭಜನಾ ಮಂಡಳಿ ಯ ಅಧ್ಯಕ್ಷ ಶ್ರೀಧರ ಅಂಚನ್, ಕೋಟಿಕಟ್ಟೆ ಮಹಮ್ಮಾಯಿ ಸೇವಾ ಸಮಿತಿಯ ಅಧ್ಯಕ್ಷ ರಾಜೇಂದ್ರ ಪೂಜಾರಿ ,ಯುವಬಿಲ್ಲವ ವೇದಿಕೆ ಮುಂಡೂರು ಇದರ ಅಧ್ಯಕ್ಷ ಸುರೇಶ್ ಸಾಲಿಯಾನ್,ಶ್ರೀಶಾರದಾಂಬ ಯುವಕ ಮಂಡಲ (ರಿ) ಮುಂಡೂರು ಇದರ ಅಧ್ಯಕ್ಷ ರಮಾನಂದ ಸಾಲಿಯಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here