


ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪೌಢಶಾಲೆಯಲ್ಲಿ 2019-20ನೇ ಶೆಕ್ಷಣಿಕ ವರ್ಷದ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ರಚಿಸಲಾಯಿತು.
ಶಾಲಾ ನಾಯಕನಾಗಿ ತಿಲಕರಾಜ್, ಉಪನಾಯಕನಾಗಿ ಚೇತನ್ ಹಾಗೂ ಕಾರ್ಯದರ್ಶಿಯಾಗಿ ನವ್ಯಶ್ರೀ.ಬಿ.ಎಮ್. ಆಯ್ಕೆಗೊಂಡರು. ಸಭಾಪತಿಯಾಗಿ ಶ್ರೇಯಾ.ಎಮ್.ಎನ್, ಶಿಕ್ಷಣ ಮಂತ್ರಿಯಾಗಿ ಮಯೂರಿ.ಎಮ್.ಜಿ, ಆರೋಗ್ಯ ಮಂತ್ರಿಗಳಾಗಿ ಮುರಳೀಧರ ಮತ್ತು ಸ್ಪಂದನಾ, ಶಿಸ್ತು ಮಂತ್ರಿಗಳಾಗಿ ಕರಣ್, ಸುಮತಿ ಮತ್ತು ಶಿವರಾಜ್, ಕೀಡಾ ಮಂತ್ರಿಯಾಗಿ ದಿವಿತ್, ಕೃಷಿ ಮಂತ್ರಿಯಾಗಿ ಅಭಿಲಾಷ್, ನೀರಾವರಿ ಮಂತ್ರಿಯಾಗಿ ಮಹಮ್ಮದ್ ಸಲೀಲ್, ಸ್ವಚ್ಚತಾ ಮಂತ್ರಿಗಳಾಗಿ ಆದರ್ಶ್ ಎ.ಎಲ್ ಮತ್ತು ಭಾಗ್ಯ, ಆಹಾರ ಮಂತ್ರಿಯಾಗಿ ಕಿರಣ್.ಎಮ್ ಮತ್ತು ತೇಜಸ್, ಮಾಹಿತಿ-ತಂತ್ರಜ್ಞಾನ ಮಂತ್ರಿಯಾಗಿ ಪಾರ್ಥ.ಪಿ.ಎಸ್, ವಿರೋಧ ಪಕ್ಷದ ನಾಯಕನಾಗಿ ಪ್ರಜ್ವಲ್ ಕೃಷ್ಣ ಹಾಗೂ ಸಾಂಸ್ಕ್ರತಿಕ ಮಂತ್ರಿಗಳಾಗಿ ಕೌಶಿಕ್ ಮತ್ತು ಚೈತನ್ಯ ಆಯ್ಕೆಗೊಂಡರು. ಮುಖ್ಯಶಿಕ್ಷಕ ಸತೀಶ್ ಭಟ್ ಹಾಗೂ ಶಿಕ್ಷಕರುಗಳು ಸಹಕರಿಸಿದರು.