ಮುಂಡೂರು: ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ತಡೆಗೋಡೆಯ ಶಿಲಾನ್ಯಾಸ

0

ಮುಂಡೂರು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಾಸಕರ ಅನುದಾನದಲ್ಲಿ ಮುಂಜೂರಾದ ರೂ. 25 ಲಕ್ಷ ಅನುದಾನದ ತಡೆಗೋಡೆಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಮುಂಡೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ. ಎಂ ದಯಾಕರ್ ಭಟ್ ಹಾಗೂ  ರಾಜೀವ ಮಂಗಳಗಿರಿ ಇವರು ಶಿಲಾನ್ಯಾಸ ನೆರವೇರಿಸಿ ಶುಭಕೋರಿದರು.

ಪ್ರಧಾನ ಅರ್ಚಕರಾದ ಅರವಿಂದ ಭಟ್ ಭೂಮಿ ಪೂಜೆ ನೆರವೇರಿಸಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಮುಖರಾದ ರವಿಪ್ರಕಾಶ್ ಭಟ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಮದಾಸ್ ಭಟ್, ಗುತ್ತಿಗೆದಾರ ಪ್ರಶಾಂತ್ ಪಾರೆಂಕಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯಾದವ್ ಕುಲಾಲ್, ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ್ ಅಂಚನ್, ಕಾರ್ಯದರ್ಶಿ ಕೇಶವ ಕುಲಾಲ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಆನಂದ ಆಚಾರ್ಯ, ವಿಶ್ವನಾಥ ಶೆಟ್ಟಿ, ಉಮಾವತಿ ಕಾಡಂಗೆ, ಪಂಚಾಯತ್ ಉಪಾಧ್ಯಕ್ಷೆ ಸವಿತಾ, ಒಕ್ಕೂಟದ ಅಧ್ಯಕ್ಷ ಚಾಮರಾಜ ಸೆಮಿತಾ, ಶಾರದಾಂಬ ಯುವಕ ಮಂಡಲದ ಅಧ್ಯಕ್ಷ ರಮಾನಂದ ಸಾಲಿಯಾನ್, ಮಹಮಾಯಿ ಸೇವಾ ಸಮಿತಿ ಕೋಟಿ ಕಟ್ಟೆ ಇದರ ಅಧ್ಯಕ್ಷ ರಾಜೇಂದ್ರ ಪೂಜಾರಿ, ಸಂತೋಷ್ ಕೆರಿಯಾರು, ಹಿರಿಯರಾದ ಜಿನ್ನಪ್ಪ ಕುಲಾಲ್, ನಾಗಾoಬಿಕಾ ಭಜನಾ ಮಂಡಳಿಯ ಕಾರ್ಯದರ್ಶಿ ಜಯರಾಜ್ ಬಂಗೇರ, ಮಿಥುನ್ ಮೇಗಿನ ಕಿನಿಂಜ, ಅಭಿಲಾಶ್ ಭಟ್, ಉದಯಕುಮಾರ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here