ಶ್ರೀ ಹನುಮಗಿರಿ ಮೇಳದ 6 ನೇ ವರ್ಷದ ತಿರುಗಾಟ ಆರಂಭ

0

ಹನುಮಗಿರಿಯಲ್ಲಿ “ಜ್ವಾಲಾ ಜಾಹ್ನವಿ- ಅಶ್ವಮೇಧ” ಪ್ರಥಮ ಸೇವೆಯಾಟ

ಪುತ್ತೂರು: ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಶ್ರೀ ಹನುಮಗಿರಿ ಮೇಳದ 6 ನೇ ವರ್ಷದ ಪ್ರಥಮ ಸೇವೆಯಾಟ ` ಜ್ವಾಲಾ ಜಾಹ್ನವಿ – ಅಶ್ವಮೇಧ’ ಎಂಬ ಕಥಾ ಪ್ರಸಂಗ ನ.24 ರಂದು ಸಂಜೆ 6 ರಿಂದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಡೆಯಿತು.

ಕಾಸರಗೋಡು ಶ್ರೀ ಎಡನೀರುಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಮಂಗಳೂರು ಕಲಾಕುಂಜ ಇಸ್ಕಾನ್ ಶ್ರೀ ಕೃಷ್ಣ ಬಲರಾಮ ಮಂದಿರ ಪಿ.ವಿ.ಎಸ್ ಇದರ ಸೆಕ್ರಟರಿ ಸನಂದನ ದಾಸ ಪ್ರಭುಜೀಯವರು ಭಾಗವಹಿಸಿದರು.

 ಪ್ರಥಮ ಸೇವೆಯಾಟ ` ಜ್ವಾಲಾ ಜಾಹ್ನವಿ – ಅಶ್ವಮೇಧ’ ಎಂಬ ಕಥಾ ಪ್ರಸಂಗ ನಡೆಯಿತು. ಶ್ರೀ ಹನುಮಗಿರಿ  ಮೇಳದ ಪ್ರದರ್ಶನಕ್ಕೆ ಸಂಪೂರ್ಣ ಸಹಕಾರ ನೀಡಿರುವ ಹಲವಾರು ಮಹನಿಯರನ್ನ ಸ್ವಾಮಿಜಿಯವರು ಗೌರವಿಸಿದರು.

ಯಕ್ಷಕಲಾ ಕಲ್ಪವೃಕ್ಷ ಲೋಕಸೇವಾ ಅಯೋಗದ ಮಾಜಿ ಅಧ್ಯಕ್ಷ ಟಿ ಶ್ಯಾಮ್ ಭಟ್, ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಮೇಳದ ಮ್ಯಾನೇಜರ್ ದಿವಾಕರ ಕಾರಂತ ಮತ್ತು ಧರ್ಮದರ್ಶಿಗಳಾದ ಶಿವರಾಮ ಪಿ, ಶಿವರಾಮ ಶರ್ಮ,ಕಲಾವಿದರು ಯಕ್ಷ ಪ್ರೇಮಿ ಗಳು ಉಪಸ್ಥಿತರಿದ್ದರು.

ಶ್ರೀ ಹನುಮಗಿರಿ ಮೇಳದ ಈ ವರ್ಷದ ನೂತನ ಕಥಾ ಪ್ರಸಂಗ `ಭಾರತ ಜನನಿ’ ಆಗಿರುತ್ತದೆ. ಮೇಳದ ಪ್ರದರ್ಶನಗಳು ಬೇಕಾದ್ದಲ್ಲಿ ದಿವಾಕರ ಕಾರಂತ 9900474926 ಗೆ ಸಂಪರ್ಕಿಬಹುದಾಗಿದೆ.

LEAVE A REPLY

Please enter your comment!
Please enter your name here